
ಬೆಂಗಳೂರು: ನಿನ್ನೆ ಚರ್ಚ್ ಸ್ಟ್ರೀಟ್‌ನಲ್ಲಿ ನಡೆದ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಡಿ.31ರಂದು ಮಧ್ಯರಾತ್ರಿಯ ಹೊಸವರ್ಷಾಚರಣೆ ಅವಧಿ 1 ಗಂಟೆ ಕಡಿತಗೊಳಿಸಲಾಗಿದೆ.
ಈ ಮೊದಲು ಹೊಸ ವರ್ಷ ಸಂಭ್ರಮಾಚರಣೆಯ ಅವಧಿ ರಾತ್ರಿ 2 ಗಂಟೆಯವರೆಗೆ ಇತ್ತು.
ಆದಾಗ್ಯೂ, ಬೆಂಗಳೂರಿನಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಕಟ್ಟೆಚ್ಚರ ವಹಿಸಿದ್ದು, ಸಂಭ್ರಮಾಚರಣೆಯ ಅವಧಿ 1 ಗಂಟೆ ಕಡಿತಗೊಳಿಸಲಾಗಿದೆ. ಹೀಗಿರುವಾಗ ರಾತ್ರಿ 1 ಗಂಟೆಯವರೆಗೆ ಮಾತ್ರ ಜನರು ಸಂಭ್ರಮಾಚರಣೆ ನಡೆಸಬಹುದು ಎಂದು ಸಿಟಿ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಆದೇಶ ವಿಧಿಸಿದ್ದಾರೆ.
Advertisement