ಏರ್ ಏಷ್ಯಾ ದುರಂತ: ಅವಶೇಷ, 6 ಮೃತದೇಹ ಪತ್ತೆ

162 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಏಷ್ಯಾ ವಿಮಾನ QZ8501 ಬರ್ನಿಯೋದಲ್ಲಿ ಪತನಗೊಂಡಿದ್ದು ಅದರ ಅವಶೇಷಗಳು...
ಜಾವಾ ಸಮುದ್ರದಲ್ಲಿ ತೇಲುತ್ತಿರುವ ಮೃತದೇಹಗಳು ಚಿತ್ರ(ಕೃಪೆ: ಟಿವಿ ಒನ್)
ಜಾವಾ ಸಮುದ್ರದಲ್ಲಿ ತೇಲುತ್ತಿರುವ ಮೃತದೇಹಗಳು ಚಿತ್ರ(ಕೃಪೆ: ಟಿವಿ ಒನ್)

ಜಕಾರ್ತಾ: 162 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಏಷ್ಯಾ ವಿಮಾನ QZ8501 ಬರ್ನಿಯೋದಲ್ಲಿ ಪತನಗೊಂಡಿದ್ದು ಅದರ ಅವಶೇಷಗಳು ಇಂಡೋನೇಷ್ಯಾ ಕರಾವಳಿಯಲ್ಲಿ ಪತ್ತೆಯಾಗಿದೆ.

ಸುಮಾತ್ರಾ ಮತ್ತು ಬರ್ನಿಯೋ ದ್ವೀಪಗಳ ನಡುವಿನ ಜಾವಾ ಸಮುದ್ರದಲ್ಲಿ ವಿಮಾನದ ಅವಶೇಷಗಳು ಹಾಗೂ 6 ಮೃತದೇಹಗಳು ಸಿಕ್ಕಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ಇದೀಗ ಸಿಕ್ಕಿರುವ ಅವಶೇಷವು ಏರ್ ಏಷ್ಯಾದ್ದೇ ಆಗಿದೆ ಎಂದು ವಿಮಾನಯಾನ ಸಂಸ್ಥೆಯ ಪ್ರಧಾನ ನಿರ್ದೇಶಕ ಜೋಕೋ ಮುಜಾಟ್‌ಪೋಜೋ ದೃಢಪಡಿಸಿದ್ದು,  ಬೋರ್ನಿಯೋ ದ್ವೀಪದಲ್ಲಿ ಪಂಗಕಾಲನ್ ಬನ್ ಎಂಬಲ್ಲಿ ವಿಮಾನದ ಪಾಸೆಂಜರ್ ಡೋರ್ ಮತ್ತು ಕಾರ್ಗೋ ಡೋರ್ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಕಣ್ಮರೆಯಾದ ವಿಮಾನಕ್ಕಾಗಿ ಶೋಧ ನಡೆಸುತ್ತಿದ್ದ ವೇಳೆ ವಾಯುಸೇನೆಯ ಹೆರ್ಕ್ಯುಲಿಸ್ ತಂಡಕ್ಕೆ ಸಮುದ್ರದ ತಳದಲ್ಲಿ ವಿಮಾನದಾಕೃತಿಯ ನೆರಳು ಕಾಣಿಸಿಕೊಂಡಿದೆ. ಅದನ್ನು ಶೋಧ ಮಾಡುತ್ತಾ ಹೋದಾಗ ವಿಮಾನ ಪತನಗೊಂಡಿರುವುದು ದೃಢಪಟ್ಟಿದೆ ಎಂದು ಶೋಧ ಕಾರ್ಯಾಚರಣೆಯ ಮುಖ್ಯಸ್ಥ ಬಾಂಬಾಂಗ್ ಸೋಲೆಸ್ಟಿಯೋ ಹೇಳಿದ್ದಾರೆ.

ಇಂಡೋನೇಷ್ಯಾದ ಅಧಿಕಾರಿಗಳು ಪಂಗಕಾಲನ್ ಬನ್‌ಗೆ ಹೆಲಿಕಾಪ್ಟರ್ ಮೂಲಕ ಆಗಮಿಸುತ್ತಿದ್ದು, ಏರ್ ಏಷ್ಯಾ ವಿಮಾನ ಕೊನೆಗೆ ಕಾಣಿಸಿಕೊಂಡ ಜಾಗದಲ್ಲಿ ಮೃತದೇಹಗಳು ನೀರಲ್ಲಿ ತೇಲುತ್ತಿರುವುದು ಅವರಿಗೆ ಕಂಡುಬಂದಿದೆ ಎಂದು ಹೇಳಿದ್ದಾರೆ.

ಪ್ರಯಾಣಿಕರು ಲೈಫ್ ಜಾಕೆಟ್ ಹಾಕಿರಲಿಲ್ಲ. ಮೃತದೇಹಗಳೆಲ್ಲವೂ ಊದಿಕೊಂಡಿದ್ದು, ಅವುಗಳನ್ನು ಇಂಡೋನೇಷ್ಯಾ ನಾವಿಕ ಹಡಗುಗಳಲ್ಲಿ ದಡಕ್ಕೆ ತರಲಾಗಿದೆ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ತಂಡದ ನಿರ್ದೇಶಕ ಎಸ್‌ಬಿ ಸುಪ್ರಿಯಾದಿ ಹೇಳಿದ್ದಾರೆ.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com