
ಜಕಾರ್ತಾ: 162 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಏಷ್ಯಾ ವಿಮಾನ ಕಣ್ಮರೆಯಾದಾಗಿನಿಂದ ನಿರಂತರ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಇದೀಗ ವಿಮಾನದ ಅವಶೇಷಗಳು ಪತ್ತೆಯಾಗಿವೆ.
ಸುಮಾತ್ರಾ ಮತ್ತು ಬರ್ನಿಯೋ ದ್ವೀಪಗಳ ನಡುವಿನ ಜಾವಾ ಸಮುದ್ರದಲ್ಲಿ ಅವಶೇಷವೊಂದು ಪತ್ತೆಯಾಗಿದೆ ಎಂದು ಇಂಡೋನೇಷ್ಯಾದ ಶೋಧ ಕಾರ್ಯಾಚರಣೆ ತಂಡದ ಮುಖ್ಯಸ್ಥ ಸೋಯಿಲಿಸ್ಟಿಯೋ ಮಂಗಳವಾರ ಹೇಳಿದ್ದರು.
ಆದಾಗ್ಯೂ, ಪತ್ತೆಯಾಗಿರುವ ಅವಶೇಷಗಳು ಏರ್ ಏಷ್ಯಾ QZ8501 ವಿಮಾನದ್ದೇ ಎಂದು ಇಂಡೋನೇಷ್ಯಾ ನಾಗರಿಕ ವಿಮಾನಯಾನ ಸಂಸ್ಥೆಯ ನಿರ್ದೇಶಕರು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಇದೀಗ ಸಿಕ್ಕಿರುವ ಅವಶೇಷವು ಏರ್ ಏಷ್ಯಾದ್ದೇ ಆಗಿದ್ದು ಸದ್ಯ ದೃಢೀಕರಿಸಿದ್ದು, ಸಾರಿಗೆ ಸಚಿವರು ಶೀಘ್ರದಲ್ಲೇ ಪಂಗ್‌ಕಲನ್ ಬನ್‌ಗೆ ತೆರಳಲಿದ್ದಾರೆ ಎಂದು ಜೋಕೋ ಮುರ್‌ಜಾಟ್ ಮೋಡ್ಜೋ ಹೇಳಿದ್ದಾರೆ.
Advertisement