ಕನ್ನಿಮೋಳಿ
ಕನ್ನಿಮೋಳಿ

2ಜಿ: ಕನ್ನಿಮೋಳಿ ವಿರುದ್ಧದ ಜಾಮೀನು ರಹಿತ ವಾರಂಟ್ ರದ್ದು

2ಜಿ ಸ್ಪೆಕ್ಟ್ರಂ ಬಹುಕೋಟಿ ಹಗರಣದ ಆರೋಪಿ ಡಿಎಂಕೆ ಸಂಸದೆ ಕನ್ನಿಮೋಳಿ ಅವರ ವಿರುದ್ಧ ದೆಹಲಿ ವಿಶೇಷ ಕೋರ್ಟ್...

ನವದೆಹಲಿ: 2ಜಿ ಸ್ಪೆಕ್ಟ್ರಂ ಬಹುಕೋಟಿ ಹಗರಣದ ಆರೋಪಿ ಡಿಎಂಕೆ ಸಂಸದೆ ಕನ್ನಿಮೋಳಿ ಅವರ ವಿರುದ್ಧ ದೆಹಲಿ ವಿಶೇಷ ಕೋರ್ಟ್ ಸೋಮವಾರ ಜಾರಿ ಮಾಡಿದ್ದ ಜಾಮೀನು ರಹಿತ ಬಂಧನ ವಾರಂಟ್‌ನ್ನು ರದ್ದುಗೊಳಿಸಿದ್ದು, ಸದ್ಯ ಕನಿಮೋಳಿ ಬಂಧನ ಭೀತಿಯಿಂದ ಪಾರಾಗಿದ್ದಾರೆ.

ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಿಬಿಐ ವಿಶೇಷ ಕೋರ್ಟ್ ಕನ್ನಿಮೋಳಿ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿತ್ತು. ಅಲ್ಲದೆ 2ಜಿ ಸ್ಪೆಕ್ಟ್ರಂ ಹಗರಣದ ಅಂತಿಮ ವಿಚಾರಣೆಯನ್ನು ಡಿಸೆಂಬರ್ 19ಕ್ಕೆ ನಿಗದಿ ಮಾಡಿದೆ.

ಕೋರ್ಟ್ ತಮ್ಮ ವಿರುದ್ಧ ಬಂಧನ ವಾರಂಟ್ ಜಾರಿ ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಕನ್ನಿಮೋಳಿ, ಕೂಡಲೇ ಕೋರ್ಟ್ಗೆ ಹಾಜರಾಗಿ ಕ್ಷಮೆಯಾಚಿಸಿದರು. ಬಳಿಕ ನ್ಯಾಯಾಧೀಶ ಒ.ಪಿ.ಶೈನಿ ಅವರು ಕನ್ನಿಮೋಳಿ ವಿರುದ್ಧದ ವಾರಂಟ್‌ನ್ನು ರದ್ದುಗೊಳಿಸಿದರು.

ಪ್ರಕರಣದ ಪ್ರಮುಖ ಆರೋಪಿಗಳಾದ ಕೇಂದ್ರದ ಮಾಜಿ ಸಚಿವ ಎ.ರಾಜಾ ಹಾಗೂ ಕನಿಮೋಳಿಗೆ ಕಳೆದ ಆಗಸ್ಟ್ ತಿಂಗಳಲ್ಲಿ ಸಿಬಿಐ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಪ್ರಕರಣದ ವಿಚಾರಣೆಗೆ ಹಾಜರಾಗದ ಕನಿಮೋಳಿ ವಿರುದ್ಧ ಕೋರ್ಟ್ ಇಂದು ವಾರಂಟ್ ಜಾರಿ ಮಾಡುವ ಮೂಲಕ ಶಾಕ್ ನೀಡಿತ್ತು.

ಪ್ರಕರಣ ಸಂಬಂಧ ರಾಜಾ, ಕನ್ನಿಮೋಳಿ ಸೇರಿದಂತೆ 19 ಆರೋಪಿಗಳ ವಿರುದ್ಧ ಈಗಾಗಲೇ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಆರೋಪ ಸಾಬೀತಾದರೆ ಪ್ರಕರಣದ ಎಲ್ಲ ಆರೋಪಿಗಳಿಗೆ ಕನಿಷ್ಟ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

Related Stories

No stories found.

Advertisement

X
Kannada Prabha
www.kannadaprabha.com