ಕಲ್ಲಿದ್ದಲು ಹಗರಣ; ಅಗತ್ಯ ಸಾಕ್ಷ್ಯಗಳು ಸಾಕಷ್ಟಿವೆ: ಸಿಬಿಐ

ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ, ಕಲ್ಲಿದ್ದಲು ಇಲಾಖೆ ...
ಕಲ್ಲಿದ್ದಲು
ಕಲ್ಲಿದ್ದಲು

ನವದೆಹಲಿ: ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಪಿ.ಸಿ ಪರಾಖ್ ಮತ್ತು ಇತರರ ವಿರುದ್ಧದ ಆರೋಪ ಸಾಬೀತು ಪಡಿಸಲು ಅಗತ್ಯ ಸಾಕ್ಷ್ಯಗಳು ಸಾಕಷ್ಟಿವೆ ಎಂದು ಸಿಬಿಐ ವಿಶೇಷ ಕೋರ್ಟ್‌ಗೆ ಹೇಳಿದೆ.

ಅಕ್ಟೋಬರ್ 21ಕ್ಕೆ ಸಲ್ಲಿಸಲಾದ ವರದಿಯಲ್ಲಿ  ಆರೋಪಿಗಳು ಈ  ಹಗರಣದಲ್ಲಿ ಶಾಮೀಲಾಗಿರುವುದರ ಬಗ್ಗೆ ಅಗತ್ಯ ಸಾಕ್ಷ್ಯಗಳನ್ನು ಒದಗಿಸಲಾಗಿದೆ ಎಂದು ಸುಪ್ರೀಂಕೋರ್ಟ್ ನೇಮಕ ಮಾಡಿದ ವಿಶೇಷ ನ್ಯಾಯವಾದಿ ಆರ್.ಎಸ್ ಚೀಮಾ ಹೇಳಿದ್ದಾರೆ.

ನ್ಯಾಯಾಲಯವು ಸಿಬಿಐ ಸಲ್ಲಿಸಿದ ಅಂತಿಮ ವರದಿಯನ್ನು ಗಮನಿಸಬೇಕು. ಅದರಲ್ಲಿ ಆರೋಪಿಗಳು ಈ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳಿವೆ ಎಂದು ವಿಚಾರಣೆ ವೇಳೆ ಚೀಮಾ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, ಅಂತಿಮ ವರದಿ ಬಗ್ಗೆ ನ್ಯಾಯಾಲಯ ನಿರ್ಧರಿಸುತ್ತದೆ. ಆದರೆ ಸಿಬಿಐ ತನ್ನ ದಾಖಲೆಗಳನ್ನು ತಯಾರು ಮಾಡಿದೆಯೆ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಚೀಮಾ ಅವರು, ಇದಕ್ಕೆ ಇನ್ನು ಹೆಚ್ಚಿನ ತನಿಖೆಗಳ ಅಗತ್ಯವಿದೆ ಎಂದಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿರ್ಲಾ, ಪರಾಖ್ ಮತ್ತು ಇತರರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com