
ವಾಶಿಂಗ್ಟನ್: ೨೦೦೮ ರಲ್ಲಿ ಮುಂಬೈ ನ ತಾಜ್ ಹೋಟೆಲ್ ದಾಳಿಯಲ್ಲಿ ಹಾನಿಗೊಳಗಾದ ೯ ಅಮೇರಿಕನ್ ಮತ್ತು ಇಸ್ರೇಲಿ ಸಂತ್ರಸ್ತರು, ನಿಷೇಧಿತ ಜೆ ಯು ಡಿ ಮುಖಸ್ಥ ಹಪೀಜ್ ಅವರನ್ನು ಒಳಗೊಂಡಂತೆ ದಾಳಿ ನಡೆಸಿದ ಪಾಕಿಸ್ತಾನಿ ಉಗ್ರಗಾಮಿ ಸಂಘಟನೆಗಳಿಂದ ೬೮೮ ಮಿಲಿಯನ್ ಯು ಎಸ್ ಡಾಲರ್ ಗಳ ಪರಿಹಾರ ಕೇಳಿದ್ದರೆ.
ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಅಕ್ಟೋಬರ್ ೩೦ ಮತ್ತು ೩೧ ರಂದು ನಡೆದ ಮರು ವಿಚಾರಣೆಯಲ್ಲಿ, ಜಮಾತ್ ಉದ್ ದಾವಾ(ಜೆ ಯು ಡಿ) / ಲಷ್ಕರ್ ಎ ತೈಬಾ (ಎಲ್ ಇ ಟಿ) ಉಗ್ರ ಸಂಸ್ಥೆಗಳ ವಿರುದ್ಧ ಗೈರುಹಾಜರಿ ತೀರ್ಪು ನೀಡುವಂತೆ ವಾದ ಮಾಡಿದ್ದಾರೆ.
೨೬/೧೧ ಎಲ್ ಇ ಟಿ ದಾಳಿಯಲ್ಲಿ ಮೃತಗೊಂಡ ಹಾಗೂ ಗಾಯಗೊಂಡವರ ಕುಟುಂಬ ಸದಸ್ಯರು ಈ ಪರಿಹಾರಕ್ಕೆ ಬೇಡಿಕೆಯಿಟ್ಟಿದ್ದಾರೆ. ಪಾಕಿಸ್ತಾನಿ ಗುಪ್ತಚರ ಇಲಾಖೆ ಐ ಎಸ್ ಐ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಇವರು ಬೇಡಿಕೆಯಿಟ್ಟಿದ್ದರು. ಆದರೆ ಅಮೇರಿಕಾ ಸರ್ಕಾರ ಪಾಕಿಸ್ತಾನಕ್ಕೆ ರಾಜತಾಂತ್ರಿಕ ವಿನಾಯಿತಿ ಇದೆ ಎಂದು ವಾದ ಮಾಡಿದ ನಂತರ ನ್ಯಾಯಾಲಯ ಈ ಮನವಿಯನ್ನು ತಳ್ಳಿ ಹಾಕಿತ್ತು.
ಮುಂಬೈನ ವಿವಿಧ ಪ್ರದೇಶಗಳಲ್ಲಿ ೧೦ ಎಲ್ ಇ ಟಿ ಉಗ್ರಗಾಮಿಗಳು ನಡೆಸಿದ್ದ ಈ ದಾಳಿಯಲ್ಲಿ ಸುಮಾರು ೧೬೬ ಜನ ಮೃತಪಟ್ಟು ೩೦೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
Advertisement