ಬಿಜೆಪಿ ಪರ ಮತ ಚಲಾಯಿಸುವುದಿಲ್ಲ: ಶಿವಸೇನೆ

ವಿಶ್ವಾಸಮತಯಾಚನೆ ವೇಳೆ ನಾವು ಬಿಜೆಪಿ ಪರ ಮತ ಚಲಾಯಿಸುವುದಿಲ್ಲ ಎಂದು ಬುಧವಾರ ಶಿವಸೇನೆ ಸ್ಪಷ್ಟಪಡಿಸಿದೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ನಡುವಿನ ಶೀತಲ ಸಮರಕ್ಕೆ ತೆರೆ ಬಿದ್ದಿದೆ. ವಿಶ್ವಾಸಮತಯಾಚನೆ ವೇಳೆ ನಾವು ಬಿಜೆಪಿ ಪರ ಮತ ಚಲಾಯಿಸುವುದಿಲ್ಲ ಎಂದು ಬುಧವಾರ ಶಿವಸೇನೆ ಸ್ಪಷ್ಟಪಡಿಸಿದೆ.

ಇಂದಿನಿಂದ ನಮ್ಮ ಪಕ್ಷ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ಧವಾಗಿದೆ ಎಂದು ಶಿವಸೇನಾ ಹಿರಿಯ ನಾಯಕ ರಾಮ್‌ದಾಸ್ ಕದಮ್ ಅವರು ಹೇಳಿದ್ದಾರೆ. ಅಲ್ಲದೆ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಶಿವಸೇನೆ ತನ್ನ ಎಲ್ಲಾ 63 ಶಾಸಕರಿಗೆ ವಿಪ್ ಜಾರಿ ಮಾಡಿದೆ.

ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರ ಇಂದು ಮಧ್ಯಾಹ್ನ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಬೇಕಾಗಿದ್ದು, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ಬಾಹ್ಯ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ.

ಅಧಿಕಾರ ಹಂಚಿಕೆ ಸಂಬಂಧ ಬಿಜೆಪಿ ಮತ್ತು ಶಿವಸೇನೆ ನಡುವೆ ಹೊಂದಾಣಿಕೆ ಮೂಡದ ಹಿನ್ನೆಲೆಯಲ್ಲಿ ಶಿವಸೇನೆ ಸರ್ಕಾರದಿಂದ ಹೊರಗುಳಿದಿದೆ.

ಸ್ಪೀಕರ್ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ: ಮಹಾರಾಷ್ಟ್ರ ಸ್ಪೀಕರ್ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ-ಶಿವಸೇನೆ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳೂ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿವೆ. ಈ ನಡುವೆ ನಾಮಪತ್ರ ವಾಪಸ್ ಪಡೆಯುವಂತೆ ಸಿಎಂ ಫಡ್ವವಿಸ್ ಅವರು ಕಾಂಗ್ರೆಸ್ ಹಾಗೂ ಶಿವಸೇನೆಗೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com