
ಉತ್ತರ ಪ್ರದೇಶ: ಕೇಂದ್ರ ಸರ್ಕಾರ ಪ್ರತ್ಯೇಕ ರೇಲ್ವೆ ಬಜೆಟ್ ಮಾಡಿದಂತೆ, ಪ್ರತ್ಯೇಕ ಕೃಷಿ ಬಬಜೆಟ್ ಮಾಡಬೇಕೆಂದು ಉತ್ತರ ಪ್ರದೇಶದ ಬಿಜೆಪಿ ಸಂಸದ ವಿರೇಂದ್ರ ಸಿಂಗ್ ಒತ್ತಾಯಿಸಿದ್ದಾರೆ.
ಬದೋಹಿ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸಿಂಗ್ ಕೃಷಿ ಸ್ಥಾಯೀಸಮಿತಿ ಸದಸ್ಯರಾಗಿದ್ದಾರೆ. ಕೇಂದ್ರ ಸರ್ಕಾರ ಜೈವಿಕ ಕೃಷಿಗೆ ಹೆಚ್ಚಿನ ಪ್ರೋತ್ಸಾಹನ್ನು ನೀಡಬೇಕು ಮತ್ತು ಕೃಷಿಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಬಡ ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕೆಂದು ಸಿಂಗ್ ಒತ್ತಾಯಿಸಿದ್ದಾರೆ.,
ಬಿಜೆಪಿ ಕಿಸಾನ್ ಮೋರ್ಜಾದ ಮಾಜಿ ರಾಜ್ಯಾಧ್ಯಕ್ಷರಾಗಿದ್ದ ಸಿಂಗ್, ಕೃಷಿ ಮತ್ತು ಕೃಷಿಕರಿಗೆ ಉತ್ತೇಜನ ನೀಡಲು ಗಾವ್ ಚಲೋ ಅಭಿಯಾನ್ (ಹಳ್ಳಿಯ ಕಡೆಗೆ ನಡಿಗೆ) ಆರಂಭಿಸಿದ್ದರು. ದೇಶದಲ್ಲಿ ಜೈವಿಕ ಕೃಷಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಯಾಕೆಂದರೆ ಬಡ ಕೃಷಿಕರಿಗೆ ಅಧಿಕ ಬೆಲೆ ತೆತ್ತು ರಾಸಾಯನಿಕಗಳನ್ನು ಖರೀದಿಸುವ ಸಾಮರ್ಥ್ಯವಿರಲ್ಲ. ಮಾತ್ರವಲ್ಲದೆ ಜೈವಿಕ ಕೃಷಿ ಉತ್ಪನ್ನಗಳಿಂದ ಆರೋಗ್ಯಕ್ಕೆ ಯಾವುದೇ ಹಾನಿ ಸಂಭವಿಸುವುದಿಲ್ಲ.
ಸರ್ಕಾರ ಕೃಷಿ ಹಾಗೂ ಕೃಷಿಕರಿಗೆ ಪ್ರೋತ್ಸಾಹವನ್ನು ನೀಡಬೇಕು. ಕೃಷಿಕರಿಗೆ ಸಬ್ಸಿಡಿ ನೀಡುವ ಮೂಲಕ ಉತ್ತೇಜನ ನೀಡಬೇಕೆಂದು ಸಿಂಗ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Advertisement