ಲೈಂಗಿಕ ಸಮಾನತೆಗೆ ಅಂತರಾಷ್ಟ್ರೀಯ ಚಳವಳಿಯಾಗಬೇಕು: ಮೇನಕಾ ಗಾಂಧಿ

ಲೈಂಗಿಕ ಸಮಾನತೆ ಬರೀ ಘೋಷಣೆಯಾಗದೆ ಅಂತರಾಷ್ಟ್ರೀಯ ಜನ ಚಳವಳಿಯಾಗಬೇಕು...
ಮೇನಕಾ ಗಾಂಧಿ
ಮೇನಕಾ ಗಾಂಧಿ

ನವದೆಹಲಿ: ಲೈಂಗಿಕ ಸಮಾನತೆ ಬರೀ ಘೋಷಣೆಯಾಗದೆ ಅಂತರಾಷ್ಟ್ರೀಯ ಜನ ಚಳವಳಿಯಾಗಬೇಕು ಎಂದಿದ್ದಾರೆ ಕೇಂದ್ರ ಸಚಿವೆ ಮೇನಕಾ ಗಾಂಧಿ.

ಬ್ಯಾಂಕಾಂಗ್ ನಲ್ಲಿ ನಡೆಯುತ್ತಿರುವ ಲೈಂಗಿಕ ಸಮಾನತೆ ಮತ್ತು ಮಹಿಳಾ ಸಬಲೀಕರಣ ದ ಏಷಿಯಾ ಮತ್ತು ಫೆಸಿಫಿಕ್ ಸಮಾವೇಶದಲ್ಲಿ ಭಾಷಣ ಮಾಡಿದ ಕೆಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಹೇಳಿದ್ದರೆ.

"ಶತಶತಮಾನಗಳಿಂದ ಇರುವ ಈ ಅಸಮಾನತೆಯ ವಿರುದ್ಧ ಹೋರಾಡಲು ವಿಶ್ವದಾದ್ಯಂತ ಈ ಚಳವಳಿ ಹಬ್ಬಬೇಕು. ಲೈಂಗಿಕ ಸಮಾನತೆ ಬರೀ ಘೋಷಣೆಯಾಗಬರದು" ಎಂದು ಸಚಿವೆ ತಿಳಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಮಹಿಳೆಯರು ವಿವಿಧ ಕ್ಷೇತ್ರಗಳಾದ ರಾಜಕೀಯ, ಕ್ರೀಡೆ, ವ್ಯವಹಾರ ಮುಂತಾದುವುಗಳಲ್ಲಿ ಕಳೆದ ಐದು ದಶಕಗಳಲ್ಲಿ ಮಹತ್ವವಾದುದನ್ನು ಸಾಧಿಸಿದ್ದಾರೆ ಎಂದಿರುವ ಸಚಿವೆ ಪ್ರಧಾನಿ ನರೇಂದ್ರ ಮೋದಿಯವರ ಗುರಿ ಕೂಡ ಮಹಿಳೆಯರು ಹೊಸ ಕೌಶಲ್ಯಗಳಲ್ಲಿ ಪರಿಣಿತಿ ಪಡೆಯುವುದೇ ಆಗಿದೆ ಎಂದು ಕೂಡ ಸಚಿವೆ ತಿಳಿಸಿದ್ದಾರೆ. ಪೋಲೀಸ್ ಪಡೆಯಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com