ಗನ್ ಪಾಯಿಂಟ್‌ನಲ್ಲಿ ಕಾರಂತರ ಮದುವೆ: ಕ್ಷಮೆ ಕೇಳಲ್ಲ ಎಂದ್ರು ಪಾಪು

ಗನ್ ಪಾಯಿಂಟ್‌ನಲ್ಲಿ ಶಿವರಾಮ ಕಾರಂತ...
ಪಾಟೀಲ ಪುಟ್ಟಪ್ಪ
ಪಾಟೀಲ ಪುಟ್ಟಪ್ಪ

ಹುಬ್ಬಳ್ಳಿ: ಗನ್ ಪಾಯಿಂಟ್‌ನಲ್ಲಿ ಶಿವರಾಮ ಕಾರಂತ ಅವರ ಮದುವೆ ನಡೆಯಿತು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ತಾವು ಕ್ಷಮೆ ಕೇಳುವುದಿಲ್ಲ ಎಂದು ಹಿರಿಯ ಪತ್ರಕರ್ತ ಹಾಗೂ ಕನ್ನಡ ಪರ ಹೋರಾಟಗಾರ ಪಾಟೀಲ ಪುಟ್ಟಪ್ಪ ಸ್ಪಷ್ಟಪಡಿಸಿದ್ದಾರೆ.

2010ರಲ್ಲಿ ಪ್ರಕಟಗೊಂಡ ಹಾಗೂ 2014ರಲ್ಲಿ ಮರು ಮುದ್ರಣಗೊಂಡ ಪಾಪು ಅವರ ಆತ್ಮಚರಿತ್ರೆ 'ನಾನು ಪಾಟೀಲ ಪುಟ್ಟಪ್ಪ' ಕೃತಿಯಲ್ಲಿ ಕಾರಂತರ ಮದುವೆ ವಿಷಯ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಕಾರಂತರ ಕುರಿತು ನಾನು ಸತ್ಯ ಸಂಗತಿಯನ್ನೇ ಬರೆದಿದ್ದೇನೆ. ಇತಿಹಾಸವನ್ನು ಬದಲಿಸುವ ಶಕ್ತಿ ನನಗೆ ಇಲ್ಲ. ಸತ್ಯ ಸಂಗತಿಯನ್ನು ಬರೆದರೆ ಕೆಲವರು ಅಕಾಶವೇ ಕಳಚಿ ಬಿದ್ದಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ನನ್ನ ಪುಸ್ತಕದಲ್ಲಿರುವುದೆಲ್ಲ ಸತ್ಯ. ಪುತ್ತೂರು ಮೂಲದ ಯಕ್ಷಗಾನ ಕಲಾವಿದ ನಾರಾಯಣ ಕಿಲ್ಲೆ ಹಾಗೂ ಮಾಜಿ ಸ್ಪೀಕರ್ ಕೆಕೆ ಶೆಟ್ಟಿ ಅವರು ಅವರು ನೀಡಿಡ ಮಾಹಿತಿಯನ್ನು ಆಧರಿಸಿ ನಾನು ಬರೆದಿದ್ದೇನೆ. ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.

ಆದರೆ ಪುಟ್ಟಪ್ಪ ಅವರು ತಮ್ಮ ಕೃತಿಯಲ್ಲಿ ಕಾರಂತರ ಮದುವೆಯ ವಿಷಯ ಪ್ರಸ್ತಾಪಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಾರಂತರ ಆಪ್ತ ಕಾರ್ಯದರ್ಶಿ ಮಾಲೀನಿ ಮಲ್ಯ ಅವರು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ ಮದುವೆಗೆ ಸಂಬಂಧಿಸಿದಂತೆ ಪುಟ್ಟಪ್ಪ ಅವರ ಬಳಿ ಯಾವುದೇ ದಾಖಲೆಗಳಿಲ್ಲ ಎಂದಿದ್ದರು.

ಪಾಟೀಲ ಪುಟ್ಟಪ್ಪ ಅವರು ತಮ್ಮ ಆತ್ಮಚರಿತ್ರೆಯಲ್ಲಿ, ಕಡಲತೀರದ ಬಾರ್ಗವ ಡಾ. ಶಿವರಾಮ ಕಾರಂತ ಅವರ ಗನ್ ಪಾಯಿಂಟ್ ಮದುವೆ ಕಂಡಿದ್ದಾಗಿ ಹೇಳಿದ್ದಾರೆ.  ಅದೂ ಒಂದು ಗನ್ ಪಾಯಿಂಟ್ ಮದುವೆ. ಕಾರಂತರು ಕೆ.ಟಿ. ಆಳ್ವಾ ಅವರ ಮಗಳು ಲೀಲಾಗೆ ಡಾನ್ಸ್ ಕಲಿಸಲು ಅವರ ಮನೆಗೆ ಹೋಗುತ್ತಿದ್ದರು. ಅಚಾತುರ್ಯ ನಡೆಯಿತು. ಕೆ.ಟಿ. ಆಳ್ವರು ಬಂದೂ ಕನ್ನು ತೆಗೆದು ಕೊಂಡೇ ಹೋದರು. ಮರು ಮಾತನಾಡದೆಯೇ ಕಾರಂತರು ಲೀಲಾ ಅವರನ್ನು ಮದುವೆ ಮಾಡಿ ಕೊಂಡರು,'' ಎಂದು ಪಾಪು ತಮ್ಮ ಕಾರಂತರ ಮದುವೆ ಬಗ್ಗೆ ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com