ಗುಡ್ ಫ್ರೈಡೆ ದಿನ ಸಮಾವೇಶ; ಮುಖ್ಯ ನ್ಯಾಯಾಧೀಶರಿಗೆ, ಸುಪ್ರೀಮ್ ಕೋರ್ಟ್ ಜಡ್ಜ್ ಆಕ್ಷೇಪ

ನ್ಯಾಯಾಂಗ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮೂರು ದಿನಗಳ ಸಮಾವೇಶವನ್ನು ಗುಡ್ ಫ್ರೈಡೆ ಸಮಯದಲ್ಲಿ ಇಟ್ಟುಕೊಂಡಿರುವುದಕ್ಕೆ ಸುಪ್ರೀಮ್ ಕೋರ್ಟ್
ಸುಪ್ರೀಮ್ ಕೋರ್ಟ್
ಸುಪ್ರೀಮ್ ಕೋರ್ಟ್
Updated on

ನವದೆಹಲಿ: ನ್ಯಾಯಾಂಗ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮೂರು ದಿನಗಳ ಸಮಾವೇಶವನ್ನು ಗುಡ್ ಫ್ರೈಡೆ ಸಮಯದಲ್ಲಿ  ಇಟ್ಟುಕೊಂಡಿರುವುದಕ್ಕೆ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರೊಬ್ಬರು ಭಾರತೀಯ ಮುಖ್ಯ ನ್ಯಾಯಾಧೀಶರಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಪೆಕ್ಸ್ ನ್ಯಾಯಾಲಯದ ನ್ಯಾಯಾಧೀಶ ಕುರಿಯನ್ ಜೋಸೆಫ್ ಅವರು ಗುಡ್ ಫ್ರೈಡೆ ಇಂದ ಈಸ್ಟ್ರನ್ ಸಂಡೆ ವರೆಗೆ ೨೪ ಹೈಕೋರ್ಟ್ ನ್ಯಾಯಾಧೀಶರನ್ನು ಒಳಗೊಂಡ ಸಮಾವೇಶ ನಡೆಸುತ್ತಿರುವುದಕ್ಕೆ ಆಕ್ಷೇಪಿಸಿ ಪತ್ರ ಬರೆದಿದ್ದಾರೆ.

"ನಮ್ಮಂತಹ ಹಲವಾರು ನ್ಯಾಯಾಧೀಶರು ಹಬ್ಬದ ರಜೆಯಲ್ಲಿ ಸಿಕ್ಕಿಹಾಕಿಕೊಡಿರುವಾಗ, ಇದೇ ಸಮಯದಲ್ಲಿ ಇಂತಹ ಸಮಾವೇಶಗಳಲ್ಲಿ ಭಾಗವಹಿಸುವೆ ಇಚ್ಛೆಯೂ ಇರುವಾಗ ಇಂತಹ ಸಮಾವೇಶವನ್ನು ಹಮ್ಮಿಕೊಳ್ಳಬಾರದಿತ್ತು ಎಂದು ಅತೀವ ನೋವಿನಿಂದ ನಿಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇನೆ" ಎಂದು ಅವರು ಮುಖ್ಯ ನ್ಯಾಯಾಧೀಶ ಎಚ್ ಎಲ್ ದತ್ತು ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದಕ್ಕೆ ಖಾರವಾಗಿ ಪ್ರತಿಕ್ರಿಸಿರುವ ಮುಖ್ಯ ನ್ಯಾಯಾಧೀಶ ಎಚ್ ಎಲ್ ದತ್ತು "ನಾವು ವೈಯಕ್ತಿಕ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂದು ಕಾರ್ಯಕ್ರಮ ಆಯೋಜಿಸಬೇಕೋ ಅಥವಾ ಸಾಂಸ್ಥಿಕ ಹಿತದೃಷ್ಟಿಯಿಂದಲೋ" ಎಂದು ಪ್ರತಿಕ್ರಿಯಿಸಿದ್ದಾರೆ.

"ಹಲವಾರು ನ್ಯಾಯಧೀಶರು ತಮ್ಮ ವೈಯಕ್ತಿಕ ಕಾರ್ಯಕ್ರಮಗಳನ್ನು ಬದಿಗೊತ್ತಿ ಸಮಾವೇಶಕ್ಕೆ ಬಂದಿದ್ದಾರೆ" ಎಂದು ದತ್ತು ಬರೆದಿದ್ದಾರೆ.

ಕ್ರಿಶ್ಚಿಯನ್ನರು ಗುಡ್ ಫ್ರೈಡೆ ದಿನ ಕೆಲಸ ಮಾಡಬಾರದೇಕೆ ಎಂದು ಪ್ರಶ್ನಿಸಿರುವ ಅಪೆಕ್ಸ್ ಕೋರ್ಟ್ ಕೆ ಟಿ ಥಾಮಸ್ ಅವರಿಂದ ಎಚ್ ಎಲ್ ದತ್ತು ಅವರಿಗೆ ಬೆಂಬಲ ದೊರಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com