ಕಲ್ಲಿದ್ದಲು ಪ್ರಕರಣ: ಮನಮೋಹನ್ ಸಿಂಗ್ ವಿರುದ್ಧದ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್
ನವದೆಹಲಿ: ಕಲ್ಲಿದ್ದಲು ಬ್ಲಾಕ್ ವಿಂಗಡನೆಯಲ್ಲಿ ಅವ್ಯವಹಾರದ ಪ್ರಕರಣದಲ್ಲಿ, ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಜುಲೈ ೧೫ ರಂದು ನ್ಯಾಯಾಲಯಕ್ಕೆ ಹಾಜರಾಗುವಂತ ಸಮನ್ಸ್ ಇದ್ದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಬುಧವಾರ ಮುಂದೂಡಿದೆ.
ತಲಬಿರಾ-೨ ಕಲ್ಲಿದ್ದಲು ಬ್ಲಾಕ್ ಅನ್ನು ಕುಮಾರ್ ಮಂಗಳಂ ಬಿರ್ಲಾ ಒಡೆತನದ ಹಿಂಡಾಲ್ಕೊ ಸಂಸ್ಥೆಗೆ ವಹಿಸಿರುವ ಆರೋಪದಲ್ಲಿ ಮನಮೋಹನ್ ಸಿಂಗ್ ಅವರಿಗೆ ಸಿ ಬಿ ಐ ಸಮನ್ಸ್ ನೀಡಿತ್ತು. ಆದರೆ ಇದಕ್ಕೆ ಸುಪ್ರೀಮ್ ಕೋರ್ಟ್ ಏಪ್ರಿಲ್ ೧ ರಂದು ತಡೆಯಾಜ್ಞೆ ನೀಡಿರುವುದನ್ನು ಕೋರ್ಟ್ ನ ಗಮನಕ್ಕೆ ತಂದ ಮೇಲೆ ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ.
ಸಿಬಿಐ ನ ಮಾರ್ಚ್ ೧೧ರ ಆದೇಶವನ್ನು ಪ್ರಶ್ನಿಸಿ ಅಪೆಕ್ಸ್ ನ್ಯಾಯಾಲಯ ಸಿಬಿಐಗೂ ನೋಟಿಸ್ ನೀಡಿ ಮುಂದಿನ ಕ್ರಮಗಳಿಗೆ ತಡೆ ನೀಡಿತ್ತು.
ಹಾಗೆಯೆ ಉದ್ಯಮಿ ಬಿರ್ಲಾ, ಮಾಜಿ ಕಲ್ಲಿದ್ದಲು ನಿರ್ದೇಶಕ ಪಿ ಸಿ ಪರಾಕ್, ಡಿ ಭಟ್ಟಾಚಾರ್ಯ ಹಾಗೂ ಹಿಂಡಾಲ್ಕೊ ವಿರುದ್ಧದ ಸಮನ್ಸ್ ಗೆ ಕೂಡ ನ್ಯಾಯಾಲಯ ನಿಷೇಧ ಹೇರಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ