ತ್ರಿರಾಷ್ಟ್ರ ಪ್ರವಾಸ: ಪ್ಯಾರಿಸ್ ಗೆ ಬಂದಿಳಿದ ಪ್ರಧಾನಿ ಮೋದಿ

ಫ್ರಧಾನಿ ನರೇಂದ್ರ ಮೋದಿ ಅವರ ಮೂರು ರಾಷ್ಟ್ರಗಳ ಪ್ರವಾಸ ಆರಂಭಗೊಂಡಿದ್ದು, ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಗೆ ಬಂದಿಳಿದ ಮೋದಿ ಅವರನ್ನು ಫ್ರಾನ್ಸ್ ಸಚಿವರಾದ...
ಪ್ಯಾರಿಸ್ ಗೆ ಬಂದಿಳಿದ ಪ್ರಧಾನಿ ಮೋದಿ
ಪ್ಯಾರಿಸ್ ಗೆ ಬಂದಿಳಿದ ಪ್ರಧಾನಿ ಮೋದಿ

ಪ್ಯಾರಿಸ್: ಫ್ರಧಾನಿ ನರೇಂದ್ರ ಮೋದಿ ಅವರ ಮೂರು ರಾಷ್ಟ್ರಗಳ ಪ್ರವಾಸ ಆರಂಭಗೊಂಡಿದ್ದು, ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಗೆ ಬಂದಿಳಿದ ಮೋದಿ ಅವರನ್ನು ಫ್ರಾನ್ಸ್ ಸಚಿವರಾದ ಸೆರ್ಗೊಲಿನ್ ರಾಯಲ್ ಮತ್ತು ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.

ಗುರುವಾರ ರಾತ್ರಿ ಭಾರತದಿಂದ ಹೊರಟಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊತ್ತ ವಿಶೇಷ ಏರ್ ಇಂಡಿಯಾ ವಿಮಾನ ಇಂದು ಪ್ಯಾರಿಸ್ ನ ಆರ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಫ್ರಾನ್ಸ್ ಸರ್ಕಾರದ ಹಿರಿಯ ಸಚಿವರಾದ ಸೆರ್ಗೊಲಿನ್ ರಾಯಲ್ ಮತ್ತು ಹಿರಿಯ ಅಧಿಕಾರಿಗಳು ಆಗಮಿಸಿದ್ದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫ್ರಾನ್ಸ್ ನಲ್ಲಿರುವ ಭಾರತೀಯ ಸಮುದಾಯದವರು ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು.

ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಒತ್ತು
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಮೂರು ರಾಷ್ಟ್ರಗಳ ಪ್ರವಾಸದಲ್ಲಿ ಮೇಕ್ ಇನ್ ಇಂಡಿಯಾಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಭಾರತದಲ್ಲಿ ಬಂಡವಾಳ ಹೂಡುವಂತೆ ವಿವಿಧ ಬಂಡವಾಳದಾರರೊಂದಿಗೆ ಮೋದಿ ಚರ್ಚೆ ನಡೆಸಲಿದ್ದಾರೆ. ಅಲ್ಲದೆ ಅತ್ಯಾಧುನಿಕ ಯುದ್ಧವಿಮಾನ ರಫಾಲೆ ಖರೀದಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಭಾರತ ಸುಮಾರು 60 ರಫಾಲೆ ಯುದ್ಧವಿಮಾನಗಳ ಖರೀದಿಗೆ ಒಪ್ಪಿಗೆ ನೀಡಿದ್ದು, ಡಸಾಲ್ಟ್ ಏವಿಯೇಷನ್ ಸಂಸ್ಥೆಗೆ ಸೇರಿದ 18 ವಿಮಾನಗಳನ್ನು ಭಾರತ ಖರೀದಿ ಮಾಡಲಿದ್ದು, ಉಳಿದ ವಿಮಾನಗಳ ಬಿಡಿಭಾಗಗಳನ್ನು ಬೆಂಗಳೂರಿನ ಹೆಚ್ ಎಎಲ್ ಗೆ ರಫ್ತು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ನಾವ್ ಪೆ ಚರ್ಚಾ
3 ದಿನಗಳ ಕಾಲ ಫ್ರಾನ್ಸ್ ನಲ್ಲಿ ಕಳೆಯಲಿರುವ ನರೇಂದ್ರ ಮೋದಿ ಅವರು, ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರೊಂದಿಗೆ ಲಾ ಸೀನ್ ನದಿಯಲ್ಲಿ ನಾವ್ ಪೇ ಚರ್ಚಾ (ಬೋಟ್ ಪ್ರಯಾಣ) ನಡೆಯಸಲಿದ್ದಾರೆ. ನಂತರ ಜರ್ಮನಿಗೆ ತೆರಳಲಿರುವ ಮೋದಿ, ಏ.12ರಂದು ಹ್ಯಾನೋವರ್ ನಲ್ಲಿ ಆಯೋಜಿಸಿರುವ ಬೃಹತ್ ವಾಣಿಜ್ಯಮೇಳವನ್ನು ಉದ್ಘಾಟಿಸಲಿದ್ದಾರೆ. ಏ.17ರಂದು ಮೋದಿ ಕೆನಡಾಗೆ ಪ್ರಯಾಣ ಬೆಳೆಸಲಿದ್ದು, ರಾಜಕಾರಣಿಗಳು ಹಾಗೂ ಉದ್ಯಮಿಗಳ ಜತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಕಳೆದ 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಕೆನಡಾಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com