ಯುದ್ಧಗ್ರಸ್ಥ ಯೆಮನ್ ನಲ್ಲಿ ಭಾರತೀಯನ ಮೊದಲ ಸಾವು

ಯುದ್ಧಗ್ರಸ್ಥ ಯೆಮನ್ ನಲ್ಲಿ, ಗಲ್ಫ್ ಡ್ರೋವ್ ಎಂಬ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಚಂಡೀಘರ್ ಮೂಲದ ಮಂಜಿತ್ ಸಿಂಗ್ ಆಡೆನ್ ನಗರದ ಬಾಂಬ್ ದಾಳಿಗೆ
ಯುದ್ಧಗ್ರಸ್ಥ ಯೆಮನ್ ದೇಶದ ಒಂದು ದೃಶ್ಯ
ಯುದ್ಧಗ್ರಸ್ಥ ಯೆಮನ್ ದೇಶದ ಒಂದು ದೃಶ್ಯ
Updated on: 

ನವದೆಹಲಿ: ಯುದ್ಧಗ್ರಸ್ಥ ಯೆಮನ್ ನಲ್ಲಿ, ಗಲ್ಫ್ ಡ್ರೋವ್ ಎಂಬ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಚಂಡೀಘರ್ ಮೂಲದ ಮಂಜಿತ್ ಸಿಂಗ್ ಆಡೆನ್ ನಗರದ ಬಾಂಬ್ ದಾಳಿಗೆ ಆಹುತಿಯಾಗಿದ್ದು, ಭಾರತೀಯ ಮೂಲದ ಮನುಷ್ಯನೊಬ್ಬ ಮೃತಪಟ್ಟ ಮೊದಲ ವರದಿಯಾಗಿದೆ.

ಯೆಮನ್ನಲ್ಲಿ ಸಿಲುಕಿದ ಭಾರತೀಯರನ್ನು ರಕ್ಷಿಸಲು ಆಡೆನ್ ಬಂದರಿಗೆ ಹೋಗಿದ್ದ ಐ ಎನ್ ಎಸ್ ತರ್ಕಶ್ ಹಡಗಿನಲ್ಲಿ ಮಂಜಿತ್ ಅವರ ದೇಹವನ್ನು ಭಾರತಕ್ಕೆ ತರಲಾಗಿದೆ.

ಬಾಂಬ್ ಸ್ಪೋಟದಿಂದ ತೀವ್ರ ಗಾಯಗಳಾಗಿದ್ದ ಮಂಜಿತ್ ಅವರನ್ನು ಆಸ್ಪತ್ರೆಗೆ ಸೃರಿಸಿದ್ದರೂ ಅಲ್ಲಿ ಮಂಜಿತ್ ಅವರು ಕೊನೆಯುಸಿರೆಳೆದರು ಎಂದು ನೌಕಾ ಮೂಲಗಳು ತಿಳಿಸಿವೆ.

ಜಿಬೂಟಿಯಿಂದ ಆಡೆನ್ ಬಂದರಿಗೆ ಹೊರಟ ಐ ಎನ್ ಎಸ್ ತರ್ಕಶ್ ಹಡಗು ಶುಕ್ರವಾರ ಸಂಜೆ ೪೫೦ ಜನರನು ರಕ್ಷಿಸಿತ್ತು.

ಈ ಮಧ್ಯೆ ಭಾರತೀಯ ವೈಮಾನಿಕ ದಳ ನಿಯೋಜಿಸಿದ್ದ ಸಿ-೧೬ ಯುದ್ಧ ವಿಮಾನ ಯೆಮನ್ ನಿಂದ ರಕ್ಷಣಾ ಕಾರ್ಯಚರಣೆ ಶುಕ್ರವಾರ ಪೂರ್ಣಗೊಂಡಿದೆ ಎಂದು ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com