
ಮೋಸದ ಹಗರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿ ೭ ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿದ್ದ ಸತ್ಯಂ ಕಂಪ್ಯೂಟರ್ ಸೇವೆಗಳ ಸಂಸ್ಥೆಯ ಸಂಸ್ಥಾಪಕ ರಾಮಲಿಂಗ ರಾಜು ನ್ಯಾಯಾಲಯದ ತೀರ್ಪಿನ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ.
"ಈ ತೀರ್ಪಿನ ವಿರುದ್ಧ ಸೆಷನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ" ಎಂದು ತಿಳಿಸಿದ ರಾಜು ಅವರ ವಕೀಲ ಉಮಾ ಮಹೇಶ್ವರ್ ರಾವ್ ಅವರು ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಓಹಿಯೋ ವಿಶ್ವವಿದ್ಯಾಲಯದ ಪದವೀಧರ, ೧೯೮೭ ರಲ್ಲಿ ಸತ್ಯಂ ಸಂಸ್ಥೆಯನ್ನು ಸ್ಥಾಪಿಸಿದ ರಾಮಲಿಂಗಂ ರಾಜು ಅವರನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಕ್ಕೆ, ಹಾಗೂ ಸಂಸ್ಥೆಯ ಬ್ಯಾಂಕ್ ಅಕೌಂಟಿನಲ್ಲಿ ಹಗರಣ ಮಾಡಿದ್ದಕ್ಕೆ ತಪ್ಪಿತಸ್ಥ ಎಂದು ಪರಿಗಣಿಸಿ ಗುರುವಾರ ಹೈದರಾಬಾದಿನ ಕೋರ್ಟ್ ರಾಜು ಅವರಿಗೆ ಶಿಕ್ಷೆ ನೀಡಿತ್ತು.
ಜನವರಿ ೨೦೦೯ ರಲ್ಲಿ ರಾಜು ಅವರು ಸಂಸ್ಥೆಯಲ್ಲಿ ನಡೆಸಿದ ಮೋಸದ ಬಗ್ಗೆ ತಪ್ಪೊಪ್ಪಿಗೆ ಪತ್ರ ನೀಡಿದ್ದರು.
Advertisement