
ನವದೆಹಲಿ: ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಸದ್ಯಕ್ಕೆ ನಾವು ಜನತಾ ಪರಿವಾರ ವಿಲೀನ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ತಕ್ಷಣವೇ ವಿಲೀನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಹೆಸರು ಮತ್ತು ಚಿನ್ಹೆ ಬಗ್ಗೆ ಗೊಂದಲವಾಗುತ್ತದೆ. ಚುನಾವಣೆಗೆ ಸಿದ್ಧತೆ ನಡೆದಿರುವ ಈ ಹೊತ್ತಿನಲ್ಲಿ ಅಂತಹ ಗೊಂದಲ ನಮಗೆ ಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ವಿಲೀನಕ್ಕೆ ನಾನು ವಿರೋಧ ಮಾಡ್ತಾ ಇದ್ದೇನೆ, ಜೆಡಿಎಸ್ ವಿಲೀನದಲ್ಲಿ ಭಾಗಿ ಆಗೊಲ್ಲ ಅನ್ನುವುದು ಸರಿ ಅಲ್ಲ. ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಪರಿಸ್ಥಿತಿಯನ್ನು ಜನತಾ ಪರಿವಾರದ ನಾಯಕರಿಗೆ ವಿವರಿಸಿದ್ದೇನೆ. ಅವರು, ಒಪ್ಪಿದ್ದಾರೆರೆ. ಬಿಬಿಎಂಪಿ ಚುನಾವಣೆ ಮುಗಿದ ನಂತರ ನಾವು ವಿಲೀನ ಪ್ರಕ್ರಿಯೆಯಲ್ಲಿ ಭಾಗಿಗಳಾಗುತ್ತೇವೆ ಎಂದರು.
ವಿಲೀನ ಎಂದರೆ ಅಷ್ಟು ಸಲೀಸಲ್ಲ. ನಾವು ಎಲ್ಲಾ ರಾಜ್ಗಳಲ್ಲಿ ಜಿಲ್ಲಾ ಘಟಕಗಳಲ್ಲಿ ಮಾತನಾಡಬೇಕು. ಸ್ಥಳೀಯ ಹೊಂದಾಣಿಕೆ ಬಗ್ಗೆ ಚರ್ಚೆ ಮಾಡಬೇಕು. ಈಗ ನಾವು ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಇರುವುದರಿಂದ ಅದನ್ನೆಲ್ಲ ಮಾಡಲು ಆಗಲ್ಲ. ಚುನಾವಣೆ ತಯಾರಿ ಮಾಡ್ತಾ ಇದ್ದೇವೆ ಇದೆ. ಚುನಾವಣೆ ನಮಗೆ ಅಗ್ನಿಪರೀಕ್ಷೆ. ಹಾಗಾಗಿ ಲೋಕಸಭಾ ಅಧಿವೇಶನದಲ್ಲೂ ಭಾಗವಹಿಸಲು ಸಾಧ್ಯವಾಗಲ್ಲ. ನಾವು ಗೆದ್ದ 17 ಸ್ಥಾನಗಳ ಮೀಸಲಾತಿಯನ್ನು ಮತ್ತೆ ಗೆಲ್ಲಬಾರದು ಎಂಬ ದುರುದ್ದೇಶದಿಂದ ಬದಲಾಯಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸದ್ಯಕ್ಕೆ ವಿಲೀನದಲ್ಲಿ ಭಾಗಿ ಆಗೊಲ್ಲ. ವೀಲೀನ ಆಗಬೇಕು ಅನ್ನೋದರಲ್ಲಿ ನಾನು ಮೊದಲಿಗ. ಮುಂದೆ ನಾವೂ ಅದರಲ್ಲಿ ಸಕ್ರಿಯ ಭಾಗಿ ಆಗ್ತೇವೆ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಫುಲ್ ಸ್ಟ್ರಾಂಗ್
ಇನ್ನು ಮುಂದೆ ಕೇಂದ್ರದ ಎನ್‍ಡಿಎ ಸರ್ಕಾರಕ್ಕೆ ಎರಡು ತಲೆನೋವು. ಮೊದಲು ಕಾಂಗ್ರೆಸ್‍ನಷ್ಟೇ ಮನವೊಲಿಸಿದರೆ ಸಾಕಿತ್ತು. ಈಗ ಜನತಾ ಪರಿವಾರದಿಂದಲೂ 30 ಸ್ಥಾನಗಳಾಗುತ್ತವೆ. ಹೀಗಾಗಿ ಮೋದಿ ಸರ್ಕಾರ ರಾಜ್ಯಸಭೆಯಲ್ಲಿ ಮಸೂದೆ ಪಾಸ್ ಮಾಡಿಸಿಕೊಳ್ಳಬೇಕಿದ್ದರೆ ಇವರ ಮನವೊಲಿಕೆಯನ್ನೂ ಮಾಡಬೇಕು. ಆದರೆ ಲೋಕಸಭೆಯಲ್ಲಿ ಕೇವಲ 15 ಸ್ಥಾನ ಇರುವುದರಿಂದ ಅಷ್ಟೇನೂ ಪ್ರಬಲವಾಗಲ್ಲ.
Advertisement