ಯೆಮನ್ ನಲ್ಲಿ ಯುದ್ಧ ಅಂತ್ಯಗೊಳಿಸಿದ ಸೌದಿ ಅರೇಬಿಯಾ

ಯೆಮನ್ ನಲ್ಲಿ ಹೌಥಿ ಬಂಡುಕೋರರ ವಿರುದ್ಧ ನಡೆಸಿದ್ದ ಸೇನಾ ದಾಳಿಯನ್ನು ಕೊನೆಗೊಳಿಸಿರುವುದಾಗ ಸೌದಿ ಅರೇಬಿಯಾ ನಾಯಕತ್ವದ
ಯೆಮನ್ ಯುದ್ಧದ ಒಂದು ದೃಶ್ಯ
ಯೆಮನ್ ಯುದ್ಧದ ಒಂದು ದೃಶ್ಯ

ರಿಯಾದ್: ಯೆಮನ್ ನಲ್ಲಿ ಹೌಥಿ ಬಂಡುಕೋರರ ವಿರುದ್ಧ ನಡೆಸಿದ್ದ ಸೇನಾ ದಾಳಿಯನ್ನು ಕೊನೆಗೊಳಿಸಿರುವುದಾಗ ಸೌದಿ ಅರೇಬಿಯಾ ನಾಯಕತ್ವದ ಒಕ್ಕೂಟ ಘೋಷಿಸಿದೆ.

'ಆಪರೇಶನ್ ಡಿಸಿಸಿವ್ ಸ್ಟಾರ್ಮ್' ಹೆಸರಿನಲ್ಲಿ ನಡೆದ ಈ ವೈಮಾನಿಕ ದಾಳಿಯನ್ನು ಅಂತ್ಯಗೊಳಿಸಿರುವುದಾಗಿ ಒಕ್ಕೂಟ ಘೋಷಿಸಿದೆ. "ಸೌದಿ ಅರೇಬಿಯಾ ಮತ್ತು ಮಿತ್ರ ರಾಷ್ಟ್ರಗಳ ಮೇಲಿದ್ದ ಭದ್ರತಾ ಭೀತಿಯನ್ನು ತೊಡೆದುಹಾಕಲು ಯಶಸ್ವಿಯಾಗಿದ್ದೇವೆ" ಎಂದು ಸೌದಿ ಭದ್ರತಾ ಸಚಿವಾಲಯ ತಿಳಿಸಿದೆ.

"ಯೆಮನ್ ನಲ್ಲಿ ಹೌಥಿ ಉಗ್ರಗಾಮಿಗಳ ಚಲನವಲನ ನಡೆಯದಂತೆ ಮುಂದೆಯೂ ನೋಡಿಕೊಳ್ಳುತ್ತೇವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸೇನಾಕಾರ್ಯಾಚರಣೆಯ ನಂತರ "ಆಪರೇಶನ್ ರೆಸ್ಟೋರಿಂಗ್ ಹೋಪ್" (ನಂಬಿಕೆ ಮರಕಳಿಸುವ ಕಾರ್ಯಾಚರಣೆ)ಯನ್ನು ಸೌದಿ ಘೋಷಿಸಿದೆ.

ನ್ಯಾಯಬದ್ಧವಾದ ಯೆಮನ್ ಸರ್ಕಾರದ ಜೊತೆ ಬಾಂಧವ್ಯವನ್ನು ಮುಂದುವರೆಸುವ ಹಾದಿಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಆಪರೇಶನ್ ರೆಸ್ಟೋರಿಂಗ್ ಹೋಪ್" ಬುಧವಾರದಿಂದ ಪ್ರಾಂಭವಾಗಲಿದ್ದು, ಯೆಮನ್ ನಲ್ಲಿ ಭಯೋತ್ಪಾದಕರಿಂದ ನಾಗರಿಕರನ್ನು ರಕ್ಷಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.

ಯೆಮನ್ ಆರೋಗ್ಯ ಸಚಿವರ ಪ್ರಕಾರ ಈ ವೈಮಾನಿಕ ದಾಳಿಯಲ್ಲಿ ೭೦೦ ಜನ ಸತ್ತಿದ್ದು, ೩೦೦೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com