ಲಕ್ವಿ ಬಿಡುಗಡೆ: ಅಮೆರಿಕ ತೀವ್ರ ಅಸಮಧಾನ

ಮುಂಬೈ ಭಯೋತ್ಪಾದನಾ ದಾಳಿಯ ಮುಖ್ಯ ಸೂತ್ರದಾರ ಭಯೋತ್ಪಾದಕ ಜಾಕಿರ್ ರೆಹಮಾನ್ ಲಕ್ವಿಯ ಬಿಡುಗಡೆಗೆ
ಜಾಕಿರ್ ರೆಹಮಾನ್ ಲಕ್ವಿ
ಜಾಕಿರ್ ರೆಹಮಾನ್ ಲಕ್ವಿ
Updated on

ನವದೆಹಲಿ: ಮುಂಬೈ ಭಯೋತ್ಪಾದನಾ ದಾಳಿಯ ಮುಖ್ಯ ಸೂತ್ರದಾರ ಭಯೋತ್ಪಾದಕ ಜಾಕಿರ್ ರೆಹಮಾನ್ ಲಕ್ವಿಯ ಬಿಡುಗಡೆಗೆ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಅಮೆರಿಕದ ಉನ್ನತ ಅಧಿಕಾರಿ ನಿಶಾ ಬಿಸ್ವಾಲ್ ಬುಧವಾರ ತಿಳಿಸಿದ್ದಾರೆ. ಇದು ಮುಂಬೈ ದಾಳಿಯಲ್ಲಿ ಭಾಗಿಯಾದವರನ್ನು ಶಿಕ್ಷೆಗೆ ಗುರಿಪಡಿಸಬೇಕು ಎನ್ನುವ ಭಾರತದ ಕೂಗಿಗೆ ಬೆಂಬಲ ದೊರೆತಂತಾಗಿದೆ.

ಲಕ್ವಿ ಅವರ ಬಿಡುಗಡೆಯನ್ನು ಪಾಕಿಸ್ತಾನ ಅಧಿಕಾರಿಗಳು ತಡೆಯುತ್ತಿದ್ದ ನಡೆಯನ್ನು ಅಮೇರಿಕಾ ಮೆಚ್ಚಿತ್ತು ಅದು ಹಾಗೆಯೇ ಮುಂದುವರೆಯುತ್ತದೆ ಎಂದು ನಂಬಿತ್ತು ಎಂದು ದಕ್ಷಿಣ ಮತ್ತು ಕೇಂದ್ರ ಏಶಿಯಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಬುಧವಾರ ತಿಳಿಸಿದ್ದಾರೆ.

"ಮುಂಬೈ ಭಯೋತ್ಪಾದನಾ ದಾಳಿ ನಡೆಸಿದವರನ್ನು ನ್ಯಾಯಾಲಯಕ್ಕೆ ಎಳೆದು ತರಬೇಕೆನ್ನುವುದು ಭಾರತದ ಗುರಿ ಅದಕ್ಕೆ ನಮ್ಮ ಸಹಮತ ಇದೆ" ಎಂದು ಅವರು ಶಿಕಾಗೋ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಹೇಳಿದ್ದಾರೆ.

"ಮುಂಬೈ ದಾಳಿಕೋರರನ್ನು ನ್ಯಾಯಾಲಯಕ್ಕೆ ತರುವ ಭಾರತದ ಪ್ರಯತ್ನಕ್ಕೆ ನಮ್ಮ ಸಹಕಾರವಿದೆ ಹಾಗು ಅಮೆರಿಕ ನಾಗರಿಕರನ್ನು ಒಳಗೊಂಡ ಈ ದಾಳಿಯ ಸಂತ್ರಸ್ತರಿಗೆ ನ್ಯಾಯ ಒದಗಿಸುವುದಕ್ಕೆ ಕೂಡ ನಾವು ಬದ್ಧರಿದ್ದೇವೆ" ಎಂದು ಬಿಸ್ವಾಲ್ ತಿಳಿಸಿದ್ದಾರೆ.

"ಒಳ್ಳೆಯ ಭಯೋತ್ಪಾದಕ ಕೆಟ್ಟ ಭಯೋತ್ಪಾದಕ ಎಂದೇನಿಲ್ಲ. ಅವರೆಲ್ಲ ಭಯೋತ್ಪಾದಕರಷ್ಟೆ. ಭಯೋತ್ಪಾದನೆಗೆ ಸಹಾಯ ಮಾಡುವುದು ಯಾವುದೇ ರೀತಿಯಲ್ಲೂ ಒಪ್ಪಲಾಗುವುದಿಲ್ಲ" ಎಂದು ಅವರು ತಿಳಿಸಿದ್ದಾರೆ.

ಈ ತಿಂಗಳ ಮೊದಲ ವಾರದಲ್ಲಿ ರಾವಲ್ಪಿಂಡಿಯ ಜೈಲಿನಿಂದ ಲಕ್ವಿಯನ್ನು ಬಿಡುಗಡೆ ಮಾಡಲಾಗಿತ್ತು. ಅವನ ಮೇಲಿದ್ದ ದೂರುಗಳನ್ನು ಲಾಹೋರ್ ಹೈಕೋರ್ಟ್ ವಜಾ ಮಾಡಿ ಕೂಡಲೆ ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com