ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಮಿಳುನಾಡಿನ ಸಾರ್ವಜನಿಕ ಸ್ಥಳಗಳಲ್ಲಿ ಮೊಲೆಯುಣಿಸುವ ಕೊಠಡಿಗಳ ಸ್ಥಾಪನೆ

ಸರಳ ಮತ್ತು ಪರಿಣಾಮಕಾರಿ ಯೋಜನೆಯೊಂದರಲ್ಲಿ ತಾಯಂದಿರು ಮಕ್ಕಳಿಗೆ ಸಾರ್ವಜನಿಕ ಪ್ರದೇಶದಲ್ಲಿ ಎದೆಹಾಲು ಕುಡಿಸಲು ಅನುವು ಮಾಡಿಕೊಡಲು...

ಚೆನ್ನೈ: ಸರಳ ಮತ್ತು ಪರಿಣಾಮಕಾರಿ ಯೋಜನೆಯೊಂದರಲ್ಲಿ ತಾಯಂದಿರು ಮಕ್ಕಳಿಗೆ ಸಾರ್ವಜನಿಕ ಪ್ರದೇಶದಲ್ಲಿ ಎದೆಹಾಲು ಕುಡಿಸಲು ಅನುವು ಮಾಡಿಕೊಡಲು ತಮಿಳುನಾಡು ಸರ್ಕಾರ ರಾಜ್ಯದಾದ್ಯಂತ ೩೦೦ ಕೊಠಡಿಗಳ ಉದ್ಘಾಟನೆ ಮಾಡಿದೆ.

ಇವುಗಳಲ್ಲಿ ಚೆನ್ನೈ ಮಾಫುಸಿಲ್ ಬಸ್ ನಿಲ್ದಾಣ ಕೂಡ ಒಂದು. "ಚೆನ್ನೈ ಮಾಫುಸಿಲ್ ಬಸ್ ನಿಲ್ದಾಣದಲ್ಲಿ ಎಂಟು ತಾಯಂದಿರು ಏಕಕಾಲಕ್ಕೆ ಕುಳಿತು ಮಕ್ಕಳಿಗೆ ಎದೆಹಾಲು ಕುಡಿಸುವ ಸೌಲಭ್ಯವಿರುವ ಕೇಂದ್ರೀಕೃತ ಹವಾನಿಯಂತ್ರಿತ ಕೊಠಡಿಯನ್ನು ಸ್ಥಾಪಿಸಲಾಗಿದೆ. ಇಲ್ಲಿ ದಿನದ ೨೪ ಘಂಟೆಗಳ ಅಗತ್ಯ ನೆರವಿಗಾಗಿ ನರ್ಸ್ ಗಳ ಸೌಲಭ್ಯವನ್ನೂ ನೀಡಲಿದ್ದೇವೆ" ಎಂದು ಮಕ್ಕಳ ವೈದ್ಯ ತಜ್ಞ ಡಾ. ಎಸ್ ಬಾಲಸುಬ್ರಮಣ್ಯನ್ ತಿಳಿಸಿದ್ದಾರೆ.

ಈ ಸೌಲಭ್ಯದಿಂದಾಗಿ ಎದೆಹಾಲು ಕುಡಿಸುವ ತಾಯಂದಿರಿಗೆ ಹರ್ಷ ತಂದಿದೆ.

"ಇದು ನಿಜಕ್ಕೂ ಬಹಳ ಉಪಯುಕ್ತ. ನಾನು ನನ್ನ ಮಗುವನ್ನು ಡೆ ಕೇರ್ ಗೆ ಕಳುಹಿಸುವ ಮುಂಚೆ ಸಾರ್ವಜನಿಕ ಪ್ರದೇಶದಲ್ಲಿ ಎದೆಹಾಲು ಕುಡಿಸಬೇಕಿತ್ತು. ಈ ಯೋಜನೆ ನನಗೆ ಅತಿ ಹೆಚ್ಚು ಉಪಯುಕ್ತ" ಎಂದು ಬಾಣಂತಿಯೊಬ್ಬರು ತಿಳಿಸಿದ್ದಾರೆ.

ಈ ಯೋಜನೆ ವಿಶ್ವ ಮೊಲೆಯುಣಿಸುವ ವಾರದಲ್ಲೇ (ಆಗಸ್ಟ್ 1-7) ಚಾಲ್ತಿಗೆ ಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com