
ನವದೆಹಲಿ: ಮಧ್ಯಪ್ರದೇಶದ ವ್ಯಾಪಂ ಹಗರಣದ ಸಂಬಂಧ ಸಿಬಿಐ ಸೋಮವಾರ ೭೬ನೇ ಎಫ್ ಐ ಆರ್ ದಾಖಲು ಮಾಡಿದೆ.
ವ್ಯಾಪಂ ನಡೆಸಿದ್ದ ೨೦೧೩ ರ ಪೊಲೀಸ್ ಕಾಂಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ ತಪ್ಪೆಸಗಿದ್ದಾರೆ ಎಂದು ಆರೋಪಿಸಲಾಗಿರುವ ೮ ಜನರ ವಿರುದ್ದ ಈ ಹೊಸ ಅಫ್ ಐ ಆರ್ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.
ವ್ಯಾಪಂ ವಿರುದ್ಧ ಈಗಾಗಲೇ ೭೪ ಎಫ್ ಐ ಆರ್ ದಾಖಲಿಸಿರುವ ಸಿಬಿಐ, ೧೨ ಪ್ರಾಥಮಿಕ ತನಿಖೆಗಳನ್ನು ಕೂಡ ಪ್ರಾರಂಭಿಸಿದೆ.
ಜುಲೈ ೯ ರಂದು ಸುಪ್ರೀಮ್ ಕೋರ್ಟ್ ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು.
ಈ ಹಗರಣಕ್ಕೆ ಸಂಬಂಧಪಟ್ಟ ೪೦ ಜನರು ನಿಗೂಢವಾಗಿ ಸಾವನ್ನಪ್ಪಿದ್ದು ದೇಶವನ್ನು ಬೆಚ್ಚಿ ಬೀಳಿಸಿತ್ತು.
Advertisement