ಬಿಬಿಎಂಪಿ ಪ್ರಚಾರಕ್ಕೆ ಭಾನುವಾರ ಬೆಂಗಳೂರಿಗೆ ಆಗಮಿಸಿದ್ದ ಎಐಸಿಸಿ ವಕ್ತಾರೆ ಖುಷ್ಬೂ ಅವರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಬರ ಮಾಡಿಕೊಂಡ ಕ್ಷಣ.
ಪ್ರಧಾನ ಸುದ್ದಿ
ಜಯಾ ವಿರುದ್ಧ ಖುಷ್ಬೂ ವಾಗ್ದಾಳಿ
ಕರ್ನಾಟಕ ಮತ್ತು ತಮಿಳು ನಾಡು ನಡುವೆ ಉದ್ಭವಿಸಿರುವ ಕಾವೇರಿ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹಿರಿಯ ನಟಿ, ಕಾಂಗ್ರೆಸ್ ನಾಯಕಿ ಖುಷ್ಬೂ ಹೇಳಿದ್ದಾರೆ...
ಬೆಂಗಳೂರು: ಕರ್ನಾಟಕ ಮತ್ತು ತಮಿಳು ನಾಡು ನಡುವೆ ಉದ್ಭವಿಸಿರುವ ಕಾವೇರಿ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಹಿರಿಯ ನಟಿ, ಕಾಂಗ್ರೆಸ್ ನಾಯಕಿ ಖುಷ್ಬೂ ಹೇಳಿದ್ದಾರೆ.
ತಮಿಳುನಾಡು ಸಿಎಂ ಜಯಲಲಿತಾ ಅವರು ನಾಲ್ಕು ವರ್ಷದಿಂದ ಒಮ್ಮೆಯೂ ಕರ್ನಾಟಕ ಮುಖ್ಯಮಂತ್ರಿ ಜತೆ ಮಾತನಾಡಿಲ್ಲ. ಅವರಿಗೆ ಸ್ವಪ್ರತಿಷ್ಠೆ ಕಾಡುತ್ತಿದೆ.
ಭ್ರಷ್ಟಾಚಾರದಲ್ಲಿ ಜೈಲು ಸೇರಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ಅವರು ಜೈಲಿಗೆ ಹೋಗಲು ಕರ್ನಾಟಕ ಸರ್ಕಾರ ಕಾರಣವಲ್ಲ. ಹಿಂದೆ ಕಾಮರಾಜ್ ಅವರು ಕರ್ನಾಟಕ ಮುಖ್ಯ ಮಂತ್ರಿಯವರೊಂದಿಗೆ ಮಾತನಾಡಿ ಕಾವೇರಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ದರು. ಅಂತಹ ಉದಾರತೆ ಜಯಲಲಿತಾ ಅವರಿಗೂ ಬರಬೇಕು. ಅವರ ಒಂದು ಮಾತುಕತೆಯಿಂದ ತಮಿಳುನಾಡಿನ ರೈತರ ಜೀವನ ಹಸನಾಗಲಿದೆ ಎಂದರು.


