
ಬೆಂಗಳೂರು: ಅಸಾಮರ್ಥ್ಯ ಮತ್ತು ದುರ್ವತನೆ ಆರೋ- ಪದ ಮೇಲೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರನ್ನು ಪದಚ್ಯುತಿಗೊಳಿಸುವ ಮಹತ್ವದ ವಿಧೇಯಕಕ್ಕೆ ಸರ್ಕಾರ
ಸೋಮವಾರ ರಾಜ್ಯಪತ್ರ ಹೊರಡಿಸಿದೆ.
ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರ ವಿರುದ್ಧ ವ್ಯಕ್ತವಾದ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಕಳೆದ ಅಧಿವೇಶನ ಸಂದರ್ಭದಲ್ಲಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಲೋಕಾಯುಕ್ತರ ನೇಮಕ ಮತ್ತು ಪದಚ್ಯುತಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಗಿತ್ತು. ಈ ವಿಧೇಯಕಕ್ಕೆ ಆಗಸ್ಟ್ 13ರಂದು ರಾಜ್ಯಪಾಲ ವಜುಭಾಯ್ ವಾಲಾ ಅಂಕಿತ ಹಾಕಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಧೇಯಕವನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು ಕರ್ನಾಟಕ ಲೋಕಾಯುಕ್ತ ಅಧಿನಿಯಮ -2015 ಎಂಬ ಹೆಸರಿನಲ್ಲಿ ಕಾಯ್ದೆ ರೂಪದಲ್ಲಿ ಅಸ್ತಿತ್ವಕ್ಕೆ ಬರಲಿದೆ.
ಕ್ಷಣಗಣನೆ: ಲೋಕಾಯುಕ್ತ ಪದಚ್ಯುತಿ ಕಾಯ್ದೆ ಅಸ್ತಿತ್ವಕ್ಕೆ ಬರುತ್ತಿದ್ದಂತೆ ನ್ಯಾ.ಭಾಸ್ಕರ್ ರಾವ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೆ ಪ್ರಕ್ರಿಯೆ ಚುರುಕಾಗಿದೆ.
ಈ ಸಂಬಂಧ ಸ್ಪೀಕರ್‍ಗೆ ನಿರ್ಣಯ ಸಲ್ಲಿಸುವುದಕ್ಕೆ ವಿಶೇಷ ಅಧಿವೇಶನ ಕರೆಯಬೇಕಾದ ಅಗತ್ಯವಿಲ್ಲ.
ಉಭಯ ಸದನದ ಮೂರನೇ ಎರಡರಷ್ಟು ಸದಸ್ಯರು ಸ್ಪೀಕರ್ ಮತ್ತು ಸಭಾಪತಿಗಳಿಗೆ ಅರ್ಜಿ ಸಲ್ಲಿಸಿದರೆ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿಕೆ ನೀಡಿದ್ದಾರೆ.
ಹೀಗಾಗಿ ಬಿಬಿಎಂಪಿ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಿರ್ಣಯಕ್ಕೆ ಸಹಿ ಹಾಕಿ ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆ ಇದೆ. ನಿರ್ಣಯ ಸಲ್ಲಿಕೆಯಾದ ತಕ್ಷಣದಿಂದಲೇ ಹೊಸ ವಿಧೇಯಕದ ಪ್ರಕಾರ ಲೋಕಾಯುಕ್ತರ ಎಲ್ಲ ಅಧಿಕಾರಿಗಳು ತಡೆ ಹಿಡಿಯಲ್ಪಡುತ್ತದೆ. ಲೋಕಾಯುಕ್ತರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಕಷ್ಟು
ಸಾಕ್ಷಾಧಾರಗಳಿದ್ದು, ತನಿಖೆ ನಡೆಸುವಂತೆ ಹೈ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆಯಬೇಕು. ಇದಾದ ಮೂರು ತಿಂಗಳಲ್ಲಿ ನಿರ್ಣಯಕ್ಕೆ ಅಂತಿಮ ರೂಪ ಸಿಗುತ್ತದೆ.
Advertisement