ಬಿಜೆಪಿ ೧೦೨ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಬೇಕು: ಬಿಹಾರ ಮೈತ್ರಿ ಪಕ್ಷ

ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ೨೪೩ ಕ್ಷೇತ್ರಗಳ ಪೈಕಿ ಬಿಜೆಪಿ ೧೦೨ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಬೇಕು ಎಂದು ಮೈತ್ರಿ ಪಕ್ಷ ರಾಷ್ಟ್ರೀಯ ಲೋಕ ಸಮತಾ ಪಕ್ಷ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ೨೪೩ ಕ್ಷೇತ್ರಗಳ ಪೈಕಿ ಬಿಜೆಪಿ ೧೦೨ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಬೇಕು ಎಂದು ಮೈತ್ರಿ ಪಕ್ಷ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್ ಎಲ್ ಎಸ್ ಪಿ) ಶುಕ್ರವಾರ ಹೇಳಿದೆ.

ಆರ್ ಎಲ್ ಎಸ್ ಪಿ ಮುಖಂಡ ಹಾಗು ಕೇಂದ್ರ ಮಾನವ ಸಂಪನ್ಮೂಲಗಳ ರಾಜ್ಯ ಸಚಿವ ಉಪೇಂದ್ರ ಕುಶ್ವಾಹ ಪತ್ರಿಕಾ ಘೋಷ್ಠಿಯಲ್ಲಿ ಈ ಮನವಿ ಮಾಡಿದ್ದಾರೆ.

"ಕಳೆದ ಬಾರಿ ಒಂದೆ ಮೈತ್ರಿ ಪಕ್ಷವಿತ್ತು, ಈಗ ಮೂರೂ ಮೈತ್ರಿ ಪಕ್ಷಗಳಿವೆ. ಬಿಜೆಪಿ ಕಳೆದ ಬಾರಿ ಸ್ಪರ್ಧಿಸಿದ ಕ್ಷೇತ್ರಗಳ ಮೇಲಷ್ಟೇ ಗಮನ ಹರಿಸಬೇಕು" ಎಂದು ಅವರು ತಿಳಿಸಿದ್ದಾರೆ.

ಆರ್ ಎಲ್ ಎಸ್ ಪಿ ೬೭ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸುತ್ತದೆ. ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷಕ್ಕೆ (ಎಲ್ ಜೆ ಪಿ) ೭೪ ಸೀಟುಗಳನ್ನು ನೀಡಬೇಕು. ಉಳಿದವನ್ನು ಹಿಂದೂಸ್ತಾನಿ ಅವಾಂ ಮೋರ್ಚಾ ಗೆ ನೀಡಬಹುದು ಎಂದು ಕುಶ್ವಾಹ ತಿಳಿಸಿದ್ದಾರೆ.

ಬಿಹಾರದ ಮೈತ್ರಿ ಪಕ್ಷಗಳೊಂದಿಗೆ ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ೨೪೩ ಕ್ಷೇತ್ರಗಲ್ಲಿ ೧೮೫ ಕಡೆ ಬಿಜೆಪಿ ಸ್ಪರ್ಧಿಸುವ ಇರಾದೆ ಹೊಂದಿದೆ ಎಂದು ಈ ಮೊದಲು ತಿಳಿಸಿದ್ದರು.

ಮತ್ತೊಂದು ಕಡೆ ರಾಷ್ಟ್ರೀಯ ಜನತಾ ದಳ ಮತ್ತು ಜೆಡಿಯು ಸೀಟು ಹಂಚಿಕೆಯನ್ನು ಬಗೆಹರಿಸಿಕೊಂಡಿದ್ದು, ಪ್ರತಿ ಪಕ್ಷವೂ ೧೦೦ ಕಡೆ ಸ್ಪರ್ಧಿಸಲಿದ್ದು ಇನ್ನುಳಿದ ೪೩ ಕ್ಷೇತ್ರಗಳನ್ನು ಕಾಂಗ್ರೆಸ್ ಮತ್ತು ಎನ್ ಸಿ ಪಿ ಗೆ ಬಿಟ್ಟುಕೊಡಲು ನಿರ್ಧರಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com