ಬಳ್ಳಾರಿ ಸ್ಪೋಟ ಪ್ರಕರಣ: ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ

ಬಳ್ಳಾರಿಯ ತಾಳೂರು ರಸ್ತೆಯಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಭಾನುವಾರ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಸ್ಥಳಕ್ಕೆ ನೀಡಿದ್ದು, ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ...
ಸ್ಪೋಟ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿರುವ ವಿಧಿ ವಿಜ್ಞಾನ ತಜ್ಞರು
ಸ್ಪೋಟ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿರುವ ವಿಧಿ ವಿಜ್ಞಾನ ತಜ್ಞರು

ಬಳ್ಳಾರಿ: ಬಳ್ಳಾರಿಯ ತಾಳೂರು ರಸ್ತೆಯಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಭಾನುವಾರ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಸ್ಥಳಕ್ಕೆ ನೀಡಿದ್ದು, ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

ಚಿಂದಿ ಆಯುತ್ತಿದ್ದ ಆಂಧ್ರಪ್ರದೇಶದ ಮೂಲದ ಯರ್ರಿಸ್ವಾಮಿ (45) ಬಹಿರ್ದೆಸೆಗೆಂದು ತೆರಳಿದ್ದಾಗ ಶಿವ ಪೆಟ್ರೋಲ್‌ ಬಂಕ್ ಬಳಿ ಕಬ್ಬಿಣದ ಡಬ್ಬಿಯೊಂದು ಸಿಕ್ಕಿದೆ. ಈ ಡಬ್ಬಿಯನ್ನು ಸಂಜೆ 6 ಗಂಟೆಗೆ ಸುಮಾರಿಗೆ ತಾನು ವಾಸವಿದ್ದ ಶೆಡ್ ಒಂದಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಈ ವೇಳೆ ಯರ್ರಿಸ್ವಾಮಿ ಪತ್ನಿ ಇದನ್ನು ನೋಡಿ ಯಾವುದೇ ಮದ್ದಿನ ವಾಸನೆ ಬರುತ್ತಿದೆ ಹೊರ ತೆಗೆದುಕೊಂಡಿ ಬಿಸಾಡಿ ಎಂದು ಸೂಚಿಸಿದ್ದಾಳೆ. ನಂತರ ಡಬ್ಬಿಯನ್ನು ಹೊರತಂದ ಯರ್ರಿಸ್ವಾಮಿ ಕುತೂಹಲ ಎಕ್ಸೆಲ್ ಬ್ಲೇಡ್ ನಿಂದ ಡಬ್ಬಿಯನ್ನು ತೆಗೆಯುತ್ತಿದ್ದಂತೆ ಡಬ್ಬಿಯು ಸ್ಪೋಟಗೊಂಡಿದೆ. ಸ್ಪೋಟವು ತೀವ್ರವಾದ್ದರಿಂದ ಯರ್ರಿಸ್ವಾಮಿ ಸ್ಥಳದಲ್ಲೇ ಛಿದ್ರಗೊಂಡು ಸಾವನ್ನಪ್ಪಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂಧಿ ಹಾಗೂ ಶ್ವಾನ ದಳದ ಸಿಬ್ಬಂದಿಗಳು ನಿನ್ನೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ತನಿಖೆ ವೇಳೆ ಸಣ್ಣ ಸಣ್ಣ ತುಣುಕುಗಳು ಸಿಕ್ಕಿವೆ ಎಂದು ಹೇಳಲಾಗುತ್ತಿತ್ತು. ಪ್ರಕರಣದ ತನಿಖೆ ಸಂಬಂಧಿಸಿದಂತೆ ಇದೀಗ ಅಧಿಕಾರಿಗಳು ಮೂರು ತಂಡಗಳನ್ನು ರಚನೆ ಮಾಡಿದ್ದು, ಇದೀಗ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಅಧಿಕಾರಿಗಳು ಹಾಗೂ ಕಲಬುರಗಿ ಪ್ರಾದೇಶಿಕ ಎಫ್ಎಸ್ಎಲ್ ತಂಡದ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಪೋಟದ ಪರಿಣಾಮ ಕುರಿತಂತೆ ಇದೀಗ ತನಿಖಾ ತಂಡದ ಅಧಿಕಾರಿಗಳಿಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದು, ಜಿಲೆಟಿನ್ ಕಡ್ಡಿಗಳು ಇಷ್ಟು ಪರಿಣಾಮಕಾರಿ ರೀತಿಯಲ್ಲಿ ಸ್ಪೋಟಗೊಳ್ಳುವುದಿಲ್ಲ. ಸ್ಪೋಟಕ್ಕೆ ಯಾವ ಯಾವ ವಸ್ತುಗಳನ್ನು ಬಳಸಲಾಗಿದೆ ಎಂಬುದರ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com