ದ್ವಿತೀಯ ಪಿಯುಸಿ ಪಿಸಿಎಂಬಿಗೆ ಪೂರ್ಣ ಪಠ್ಯ

ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಿಸಿಎಂಬಿ ವಿಷಯಗಳ ಬ್ಲೋ ಅಪ್ ಪಠ್ಯ ಬಿಟ್ಟು ಪೂರ್ಣ ಪಠ್ಯ ಜಾರಿಗೊಳಿಸಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಅಚ್ಚರಿ ಎಂದರೆ ಪಿಯು ಕಾಲೇಜುಗಳು ಆರಂಭವಾಗಿ ಮೂರು ತಿಂಗಳು ತರುವಾಯ ಈ ಆದೇಶ ಹೊರಬಿದ್ದಿದೆ...
ದ್ವಿತೀಯ ಪಿಯುಸಿ ಪಿಸಿಎಂಬಿಗೆ ಪೂರ್ಣ ಪಠ್ಯ (ಸಾಂದರ್ಭಿಕ  ಚಿತ್ರ)
ದ್ವಿತೀಯ ಪಿಯುಸಿ ಪಿಸಿಎಂಬಿಗೆ ಪೂರ್ಣ ಪಠ್ಯ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಪ್ರಥಮ ಮತ್ತು ದ್ವಿತೀಯ ಪಿಯುಸಿ ಪಿಸಿಎಂಬಿ ವಿಷಯಗಳ ಬ್ಲೋ ಅಪ್ ಪಠ್ಯ ಬಿಟ್ಟು ಪೂರ್ಣ ಪಠ್ಯ ಜಾರಿಗೊಳಿಸಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಅಚ್ಚರಿ ಎಂದರೆ ಪಿಯು ಕಾಲೇಜುಗಳು ಆರಂಭವಾಗಿ ಮೂರು ತಿಂಗಳು ತರುವಾಯ ಈ ಆದೇಶ ಹೊರಬಿದ್ದಿದೆ.

ಇದೀಗ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಖಾಸಗಿ ಪಿಯು ಕಾಲೇಜುಗಳಲ್ಲಿ ಮೇ 15ರಿಂದಲೇ ತರಗತಿಗಳು ಆರಂಭವಾಗಿವೆ. ಜೂನ್‍ನಿಂದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ತರಗತಿ ಆರಂಭವಾಗಿದ್ದು, ಇದೀಗ ಪೂರ್ಣ ಪಠ್ಯ ಎಂದು ಇಲಾಖೆ ಘೋಷಿಸಿದೆ. ರಾಜ್ಯದ ಪಿಯು ಪಠ್ಯಕ್ರಮ ರಾಷ್ಟ್ರೀಯ ಮಟ್ಟದ ಸರಿಸಮಾನವಾಗಿರಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಪಠ್ಯಕ್ರಮಕ್ಕನುಗುಣವಾಗಿ ರಾಜ್ಯದ ಪಠ್ಯ ಪರಿಷ್ಕರಿಸಲಾಯಿತು. ನಂತರ ಅದನ್ನು ಅನುಷ್ಠಾನಕ್ಕೆ ತರುವಾಗ ಅನೇಕ ತಾಂತ್ರಿಕ ಸಮಸ್ಯೆಗಳು ಎದುರಾದವು. ರಾಜ್ಯದ ಪಿಯು ಕಾಲೇಜುಗಳಲ್ಲಿ ಪ್ರತಿ ಉಪನ್ಯಾಸಕರು ವರ್ಷದಲ್ಲಿ ಒಂದು ವಿಷಯವನ್ನು ಒಂದು ತರಗತಿಗೆ ಸರಿಸುಮಾರಾಗಿ 120 ಗಂಟೆಗಳಷ್ಟೆ ತೆಗೆದುಕೊಳ್ಳಲು ಅವಕಾಶವಿರುತ್ತದೆ.

ಇದಕ್ಕೂ ಮೀರಿ ತರಗತಿ ನಡೆಸಲು ಸಮಯಾವಕಾಶದ ಕೊರತೆ ಇರುತ್ತದೆ. ಬದಲಾದ ಪಠ್ಯದಂತೆ ಕನಿಷ್ಠ ಪಠ್ಯ ಮುಗಿಸಲು 175 ಗಂಟೆ ಬೇಕು. ಸರ್ಕಾರ ನೂತನ ಪಠ್ಯ ಅಳವಡಿಸುತ್ತಿದ್ದಂತೆ ಉಪನ್ಯಾಸಕ ವಲಯದಲ್ಲಿ ಅಪಸ್ವರ ಕೇಳಿಬಂತಲ್ಲದೇ, ಕಡ್ಡಾಯ ಮಾಡಿದರೆ ವೇತನ ಹೆಚ್ಚಿಸುವಂತೆ ಬೇಡಿಕೆಯೂ ಕೇಳಿಬಂತು. ಅಂತಿಮವಾಗಿ ಸರ್ಕಾರ ಇದಕ್ಕೊಪ್ಪದೇ ಬ್ಲೋ ಅಪ್ ಪಠ್ಯದ ಹೆಸರಿನಲ್ಲಿ ಪಠ್ಯದ ಹೊರೆ ಕಡಿಮೆಗೊಳಿಸುವ ನಿರ್ಧಾರಕ್ಕೆ ಬಂತು. ಅಂದರೆ, ಇರುವ ಪಠ್ಯದಲ್ಲಿ ಕೆಲವು ಅಂಶಗಳು ಪರೀಕ್ಷೆಗೆ ಬರುವುದಿಲ್ಲ, ಅವುಗಳನ್ನು ಕಡ್ಡಾಯವಾಗಿ ಬೋಧಿಸುವ ಅಗತ್ಯವಿಲ್ಲ ಎಂಬ ತೀರ್ಮಾನಿಸಿತು.

ಅದರಂತೆಯೇ ಪರೀಕ್ಷೆಯು ನಡೆದುಹೋಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಬ್ಲೋ ಅಪ್ ಪಠ್ಯ ಬೇಡ, ಪೂರ್ತಿ ಪಠ್ಯ ಇರಲಿ ಎಂದು ಅರ್ಧ ಶೈಕ್ಷಣಿಕ ವರ್ಷ ಕಳೆದ ನಂತರ ಇಲಾಖೆ ತೀರ್ಮಾನಿಸಿತು. ಹೀಗಾಗಿ ಉಪನ್ಯಾಸಕರು, ಕಾಲೇಜುಗಳು ಮತ್ತು ವಿದ್ಯಾರ್ಥಿ ವಲಯದಿಂದ ಆಕ್ಷೇಪ ಕೇಳಿಬಂತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರೇ ಮಧ್ಯ ಪ್ರವೇಶಿಸಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಿದ್ದರು.

ಈ ಬಾರಿ ಶೈಕ್ಷಣಿಕ ವರ್ಷ ಮೂರು ತಿಂಗಳು ಕಳೆದಿದೆ. ಆಗಸ್ಟ್ 19ರಂದು ಆದೇಶ ಹೊರಡಿಸಿರುವ ಇಲಾಖೆಯು ಸರ್ಕಾರದ ಪತ್ರದನ್ವಯ 2015-16ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಪಿಸಿಎಂಬಿ ವಿಷಯಗಳಲ್ಲಿನ ಬ್ಲೋ ಅಪ್ ಪಠ್ಯ ಕೈಬಿಟ್ಟು ಪೂರ್ಣ ಪಠ್ಯವನ್ನು ಜಾರಿಗೊಳಿಸಬೇಕೆಂದು ಆದೇಶಿಸಿದೆ.ಸರ್ಕಾರ ಈಗ ಕೈಗೊಂಡಿರುವ ನಿರ್ಧಾರದಿಂದ ಪೂರ್ಣ ಪಠ್ಯ ಅನುಷ್ಠಾನ ಸಾಧ್ಯವಿಲ್ಲ ಎಂಬ ಮಾತು ಉಪನ್ಯಾಸಕ ವಲಯದಿಂದ ಕೇಳಿಬಂದಿದೆ.

ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರೊಬ್ಬರು ಪ್ರತಿಕ್ರಿಯೆ ನೀಡಿ, `ನಮಗಿರುವ ಕಾರ್ಯಭಾರ ಒತ್ತಡದಲ್ಲಿ ಅಷ್ಟೂ ಪಠ್ಯ ಮುಗಿಸಬೇಕೆಂಬುದು ಸಾಧ್ಯವಾಗದ ಮಾತು. ಈ ವಿಚಾರದಲ್ಲಿ ಸಾಕಷ್ಟು ವಿಚಾರ ಈಗಾಗಲೇ ಚರ್ಚೆಯಾಗಿದೆ. ಹೀಗಿದ್ದರೂ ಒತ್ತಡ ಹೇರುವುದು ಸರಿಯಲ್ಲ' ಎಂದು ಅಭಿಪ್ರಾಯಟ್ಟಿದ್ದಾರೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅನಿವಾರ್ಯ: ಕಿಮ್ಮನೆ

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಶೈಕ್ಷಣಿಕ ವರ್ಷದ ಆರಂಭದಿಂದಲೇ ನಾನು ಈ ಬಾರಿ ಪೂರ್ತಿ ಪಠ್ಯ ಇರುತ್ತದೆ ಎಂದು ಹೇಳಿಕೊಂಡು ಬಂದಿದ್ದೇನೆ. ಆ ಮೂಲಕ ಮಾನಸಿಕವಾಗಿ ಸಿದಟಛಿರಾಗುವಂತೆ ತಿಳಿಸಿದ್ದೆ. ಈ ಸಂಬಂಧ ಆದೇಶ ಮಾತ್ರ ಈಗ ಆಗಿರಬಹುದು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪೂರ್ಣ ಪಠ್ಯ ಅನುಷ್ಠಾನ ಅನಿವಾರ್ಯ ಎಂದರು. ಕಳೆದ ಸಾಲಿನಲ್ಲಿ ಹೊಸವ್ಯವಸ್ಥೆ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ  ಗೊಂದಲವಾಗಬಾರದೆಂದು ಬ್ಲೋ ಅಪ್ ಸಿಲಬಸ್ ಅನುಷ್ಠಾನ ಮಾಡಿದ್ದೆವು. ಆದರೆ, ಪೂರ್ತಿ ಸಿಲಬಸ್ ಇದ್ದರಷ್ಟೇ ವಿದ್ಯಾರ್ಥಿಗಳಿಗೆ ಅನುಕೂಲ. ಇಲ್ಲವಾದಲ್ಲಿ ಸಿಇಟಿಯಲ್ಲಿ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರು.

ಇನ್ನೂ ಆಗಸ್ಟ್ ತಿಂಗಳಿನಲ್ಲಿದ್ದೇವೆ. ಹೀಗಾಗಿ ಪೂರ್ಣ ಪಠ್ಯಮುಗಿಸುವುದಕ್ಕೇನೂ ಕಷ್ಟವಾಗಲಿಕ್ಕಿಲ್ಲ. ಕೆಲವು ಆಕ್ಷೇಪ ಮಾಡುವುದು ಸಹಜ ಎಂದು ತಿಳಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com