
ನವದೆಹಲಿ: ವ್ಯಾಪಂ ಹಗರಣದ ತನಿಖೆಯ ವಿಚಾರಣೆ ಬಗ್ಗೆ ಸಿಬಿಐ ಸೋಮವಾರ ಸುಪ್ರೀಂ ಕೋರ್ಟ್ ಗೆ ಅಫಿಡೆವಿಡ್ ಸಲ್ಲಿಸಿದ್ದು, ಎಲ್ಲ ಕೇಸುಗಳನ್ನು ವಿಚಾರಣೆಗೆ ತೆಗೆದುಕೊಳ್ಳಲು ಹೆಚ್ಚಿನ ಮೂರು ವಾರದ ಸಮಯಾವಕಾಶವನ್ನು ಕೋರಿದೆ.
ಅಲ್ಲದೆ ಸಿಬಿಐ ಪಾಸೆಕ್ಯೂಟರ್ ಅವರಿಗೆ ಈ ಕೇಸುಗಳನ್ನು ಒಪ್ಪಿಸಲು ಮೂರು ವಾರದ ಸಮಯ ಕೋರಿದ್ದು, ಅಲ್ಲಿಯವರೆಗೆ ಮಧ್ಯಪ್ರದೇಶದ ಪಬ್ಲಿಕ್ ಪ್ರಾಸೆಕ್ಯೂಟರ್ ಈ ವಿಚಾರಣೆಯಲ್ಲಿ ಮುಂದುವರೆಯಲು ಮನವಿಮಾಡಿಕೊಂಡಿದೆ.
ಅಲ್ಲದೆ ಎಲ್ಲಾ ವ್ಯಾಪಂ ಕೇಸುಗಳ ವಿಚಾರಣೆಯ ಬಗ್ಗೆ ಸುಪ್ರೀಂ ಕೋರ್ಟ್ ನ ಸ್ಪಷ್ಟನೆಯನ್ನು ಕೋರಿದೆ.
ಸಿಬಿಐ ಪ್ರಕಾರ ವ್ಯಾಪಂ ಹರಣದಲ್ಲಿ ೨೧೨ ಕೇಸುಗಳಿದ್ದು, ಅವುಗಳಲ್ಲಿ ಇನ್ನೂ ೧೧೯ ಕೇಸುಗಳ ಪ್ರಾಥಮಿಕ ವಿಚಾರಣೆ ನಡೆದು ಚಾರ್ಜ್ ಶೀಟ್ ಹಾಕಬೇಕಿದೆ.
ಈ ೧೧೯ ಕೇಸುಗಳನ್ನಷ್ಟೇ ವಿಚಾರಣೆಗೆ ಕೈಗೆತ್ತುಕೊಳ್ಳಬೇಕೋ ಅಥವಾ ಎಲ್ಲ ೨೧೨ ಕೇಸುಗಳನ್ನು ವಿಚಾರಣೆ ಮಾಡಬೇಕೋ ಎಂದು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ ಸ್ಪಷ್ಟನೆಯನ್ನು ಸಿಬಿಐ ಕೋರಿದೆ.
Advertisement