
ಬೆಂಗಳೂರು: ನಗರದ ವಿವಿಧೆಡೆ 27 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಬೆಳಗ್ಗೆ 8ಕ್ಕೆ ಆರಂಭವಾಗಲಿದೆ. ಎಣಿಕೆ ಕೇಂದ್ರದಲ್ಲಿ `ಸ್ಟ್ರಾಂಗ್ ರೂಮ್'ನಲ್ಲಿ ಇವಿಎಂಗೆ ಅಳವಡಿಸಿದ್ದ ಕಂಟ್ರೋಲ್ ಯೂನಿಟ್ ಇಡಲಾಗಿರುತ್ತದೆ. ಪಕ್ಕದ ಕೊಠಡಿಯಲ್ಲಿ 14 ಚುನಾವಣಾಧಿಕಾರಿಗಳು ತಲಾ ಒಂದು ಟೇಬಲ್ ನಿರ್ವಹಿಸುತ್ತಾರೆ.
ಟೇಬಲ್‍ಗೆ ಒಂದರಂತೆ ಯೂನಿಟ್ ನೀಡಲಾಗುತ್ತದೆ. ಮತ ಎಣಿಕೆ ಆರಂಭವಾಗಿ ಕೊನೆಯಾದ ನಂತರ ಒಂದು ಸುತ್ತು ಪೂರ್ಣಗೊಳ್ಳುತ್ತದೆ. ಸುತ್ತು ಪೂರ್ಣಗೊಂಡಾಗ ಈ ಅಂಕಿ ಅಂಶವನ್ನು ಅಲ್ಲಿಯೇ ಇರುವ ಪ್ರತ್ಯೇಕ ಅಧಿಕಾರಿಗಳ ತಂಡಕ್ಕೆ ನೀಡಲಾಗುತ್ತದೆ.
ಈ ಮಾಹಿತಿಯನ್ನು ಕೇಂದ್ರದ ಮುಂದಿರುವ ಪರದೆಯಲ್ಲಿ ಪ್ರದರ್ಶನ ಮಾಡಲಾಗುವುದು. ಅಭ್ಯರ್ಥಿಗಳ ಕಡೆಯಿಂದ ಬರುವ ಏಜೆಂಟ್‍ಗಳಿಗೂ ಇಲ್ಲಿ ಅವಕಾಶ ನೀಡಲಾಗಿದೆ. ಮತ ಎಣಿಕೆ ಕೇಂದ್ರದ ಒಳಗೆ ಅಭ್ಯರ್ಥಿಗಳ ಪರವಾಗಿರುವ ಒಬ್ಬರಿಗೆ ವೀಕ್ಷಿಸಲು ಅವಕಾಶ ನೀಡಲಾಗುತ್ತದೆ.
Advertisement