ಜಮ್ಮುವಿನಲ್ಲಿ ರಾಹುಲ್ ಗಾಂಧಿ
ಜಮ್ಮುವಿನಲ್ಲಿ ರಾಹುಲ್ ಗಾಂಧಿ

ಗಡಿ ನಿಯಂತ್ರಣ ರೇಖೆ ಬಳಿಯಲ್ಲಿರುವ ಗ್ರಾಮಸ್ಥರಿಗೆ ವಿಮೆ ಅಗತ್ಯ: ರಾಹುಲ್ ಗಾಂಧಿ

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಪಾಕಿಸ್ತಾನದ ಷೆಲ್‌ ದಾಳಿಯಿಂದ ನಲುಗಿರುವ ಜಮ್ಮು–ಕಾಶ್ಮೀರದ ಗಡಿ ಭಾಗದ ಗ್ರಾಮಗಳಿಗೆ ಭೇಟಿ ನೀಡಿ...

ಜಮ್ಮು: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ  ಪಾಕಿಸ್ತಾನದ ಷೆಲ್‌ ದಾಳಿಯಿಂದ ನಲುಗಿರುವ ಜಮ್ಮು–ಕಾಶ್ಮೀರದ ಗಡಿ ಭಾಗದ ಗ್ರಾಮಗಳಿಗೆ ಭೇಟಿ ನೀಡಿ, ಗಾಯಾಳುಗಳ ಜತೆ ಮಾತುಕತೆ ನಡೆಸಿದರು. ಆಗಸ್ಟ್ 15 ರಂದು ನಡೆದಿದ್ದ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದರು.

ರಾಹುಲ್ ಗಾಂಧಿಮಗಡಿ ನಿಯಂತ್ರಣ ರೇಖೆ ಬಳಿಯ ಗ್ರಾಮಗಳಿಗೆ ಭೇಟಿ ನೀಡಿದ ಮೊದಲ ರಾಷ್ಟ್ರೀಯ ನಾಯಕರಾಗಿದ್ದಾರೆ. ಬಲಕೋಟ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಾಕಿಸ್ತಾನ ಸೇನೆ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿಯಿಂದ ಗಡಿ ಭಾಗದ ಜನತೆ ನಲುಗಿದ್ದಾರೆ. ತೀವ್ರ ಭಯದಲ್ಲಿ ದಿನದೂಡುತ್ತಿದ್ದಾರೆ. ಇಲ್ಲಿನ ಗ್ರಾಮಸ್ಥರು ಇಟ್ಟಿರುವ ಬೇಡಿಕೆಯನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ರಾಹುಲ್‌  ಗಾಂಧಿ ಜಮ್ಮು ಭೇಟಿಯನ್ನು  ಬಿಜೆಪಿ ಟೀಕಿಸಿದೆ. ಗಡಿ ಭಾಗದ ಸಮಸ್ಯೆಯನ್ನು ‘ರಾಜಕೀಯ’ಗೊಳಿಸಲು ರಾಹುಲ್‌  ಜಮ್ಮುವಿಗೆ ಭೇಟಿ ನೀಡಿದ್ದಾರೆ ವ್ಯಂಗ್ಯವಾಡಿದೆ.

Related Stories

No stories found.

Advertisement

X
Kannada Prabha
www.kannadaprabha.com