ಪಕ್ಷೇತರರಿಂದ 10 ಕೋಟಿಗೆ ಡಿಮ್ಯಾಂಡ್!

ಪಕ್ಷೇತರ ಶಾಸಕರು ತಲಾ 10 ಕೋಟಿ ನೀಡುವಂತೆ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವಂತೆ ಬಿಜೆಪಿಗೆ ಡಿಮಾ್ಯಂಡ್ ಮಾಡಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಮೂವರು ಪಕ್ಷೇತರರು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು...
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ (ಸಂಗ್ರಹ ಚಿತ್ರ)
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ (ಸಂಗ್ರಹ ಚಿತ್ರ)

ಬೆಂಗಳೂರು: ಪಕ್ಷೇತರ ಶಾಸಕರು ತಲಾ 10 ಕೋಟಿ ನೀಡುವಂತೆ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವಂತೆ ಬಿಜೆಪಿಗೆ ಡಿಮ್ಯಾಂಡ್ ಮಾಡಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಮೂವರು ಪಕ್ಷೇತರರು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಪಕ್ಷದ ಹಿರಿಯ ಮುಖಂಡರು ತಿಳಿಸಿದ್ದಾರೆ. ಆದರೆ, ಹಣ ನೀಡಲು ಸುತಾರಾಂ ಒಪ್ಪಲಿಲ್ಲ, ಸ್ಥಾಯಿ ಸಮಿತಿಯನ್ನು ಖಚಿತಪಡಿಸಿದೆವು ಎಂದು ಹೇಳಿದ್ದಾರೆ.

ಈ ನಡುವೆಯೇ ಜೆಡಿಎಸ್‍ನ ಇಬ್ಬರು, ಕಾಂಗ್ರೆಸ್‍ನ ಮೂವರು ಶಾಸಕರು ಈ ಸಂದರ್ಭ ಬಳಸಿಕೊಂಡು ಪಕ್ಷೇತರ ಶಾಸಕರನ್ನು ಒಟ್ಟು ಮಾಡಿದ್ದಾರೆ. ಇಲ್ಲಿ ಹಣ ಕೇಳಿದವರು ಅಲ್ಲಿ ಹಣ
ಪಡೆಯುತ್ತಿಲ್ಲ ಎಂಬುದೇನು ಖಾತ್ರಿ ಎಂದು ರಾಜಕೀಯ ಬೆಳವಣಿಗೆಯನ್ನು ವಿಶ್ಲೇಷಿಸಿ ದರು. ಈ ಮಧ್ಯೆಯೇ ಕೇರಳದ ರೆಸಾಟ್ರ್ ನಿಂದ ಪ್ರತಿಕ್ರಿಯೆ ನೀಡಿರುವ ಪಕ್ಷೇತರ ಸದಸ್ಯರು, ತಾವು ಕಾಂಗ್ರೆಸ್‍ಗೆ ಬೆಂಬಲಿಸುತ್ತಿದ್ದೇವೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com