
ಗೌಹಾಟಿ: ೨೦೧೬ ರ ಅಸ್ಸಾಂ ವಿಧಾನಸಭಾ ಚುನಾವಣೆಗೆ ಸದ್ಯದ ಮುಖ್ಯಮಂತ್ರಿ ತರುಣ್ ಗೊಗಾಯ್, ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಅಸ್ಸಾಂನ ಎರಡು ದಿನಗಳ ಪ್ರವಾಸಕ್ಕೆ ಶುಕ್ರವಾರ ಬಂದಿಳಿದ ಗಾಂಧಿ, ಬ್ರಹ್ಮಪುತ್ರ ಅತಿಥಿಗೃಹದಲ್ಲಿ ಸಂಪಾದಕರು ಮತ್ತು ಪತ್ರಕರ್ತರೊಂದಿಗೆ ಮಾತಾಡಿದ್ದಾರೆ.
ಅಸ್ಸಾಂ ಪ್ರದೇಶ ಕಾಂಗ್ರೆಸ್ ನಾಯಕತ್ವ ಮತ್ತು ಮುಖ್ಯಮಂತ್ರಿಯವರ ಮೇಲೆ ಪಕ್ಷಕ್ಕೆ ಸಂಪೂರ್ಣ ನಂಬಿಕೆಯಿದೆ ಮತ್ತು ಚುನಾವಣೆಯಲ್ಲಿ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅವರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಗಾಂಧಿ, ಮಹಿಳಾ ಉದ್ದಿಮೆದಾರರು ಮತ್ತು ಪಕ್ಷದ ನಾಯಕರನ್ನು ಉದ್ದೇಶಿಸಿ ಕೂಡ ಮಾತನಾಡಿದ್ದಾರೆ. ಗೌಹಾಟಿಯಿಂದ ೯೦ ಕಿಮೀ ದೂರದಲ್ಲಿನ ಬರ್ಪೇಟ ಜಿಲ್ಲೆಗೆ ತೆರಳಲಿದ್ದು ಅಲ್ಲಿ ಏಳು ಕಿಮೀ ಪಾದಯಾತ್ರೆ ನಡೆಸಲಿದ್ದಾರೆ.
Advertisement