ಬುಲೆಟ್ ವೇಗಕ್ಕೆ ರು.98 ಸಾವಿರ ಕೋಟಿ

ರಕ್ಷಣೆ, ಅಣು ಶಕ್ತಿ, ರು.98,000 ಕೋಟಿ ಅಂದಾಜು ಯೋಜನೆಯ ಭಾರತದ ಮೊಟ್ಟ ಮೊದಲ ಬುಲೆಟ್ ರೈಲು ಮಾರ್ಗ ನಿರ್ಮಾಣ ಸೇರಿದಂತೆ ಹಲವು ಒಪ್ಪಂದಗಳಿಗೆ ಭಾರತ ಮತ್ತು ಜಪಾನ್ ಮಂಗಳವಾರ ಸಹಿ ಹಾಕಿವೆ..
ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿನ್ಜೋ ಅಬೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿನ್ಜೋ ಅಬೆ

ನವದೆಹಲಿ: ರಕ್ಷಣೆ, ಅಣು ಶಕ್ತಿ, ರು.98,000 ಕೋಟಿ ಅಂದಾಜು ಯೋಜನೆಯ ಭಾರತದ ಮೊಟ್ಟ ಮೊದಲ ಬುಲೆಟ್ ರೈಲು ಮಾರ್ಗ ನಿರ್ಮಾಣ ಸೇರಿದಂತೆ ಹಲವು ಒಪ್ಪಂದಗಳಿಗೆ ಭಾರತ ಮತ್ತು  ಜಪಾನ್ ಮಂಗಳವಾರ ಸಹಿ ಹಾಕಿವೆ.

ಭಾರತ ಜಪಾನ್ ಶೃಂಗಸಭೆ ನಂತರ ಪ್ರಧಾನಿ ನರೇಂದ್ರಮೋದಿ ಮತ್ತು ಜಪಾನ್ ಪ್ರಧಾನಿ ಶಿನ್ಜೋ ಅಬೆ ಸಹಿ ಹಾಕಿ ಉಭಯ ರಾಷ್ಟ್ರಗಳ ನಡುವೆ ಕೇವಲ ಆರ್ಥಿಕ ಒಪ್ಪಂದಗಳಲ್ಲದೇ ರಕ್ಷಣೆ ಮತ್ತು ಪರಸ್ಪರ ಸಹಕಾರಕ್ಕೆ ಬದ್ಧವೆಂದು ಘೋಷಿಸಿದರು. ಇದೇ ವೇಳೆ ವಿಶ್ವಸಂಸ್ಥೆ ರಕ್ಷಣಾ ಸುಧಾರಣೆ ಸೇರಿದಂತೆ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಲಯದಲ್ಲಿ ಪರಸ್ಪರ  ಪ್ರಾಮುಖ್ಯತೆ ಕುರಿತಂತೆ ಯೂ ಉಭಯ ನಾಯಕರು ಚರ್ಚಿಸಿದರು. ಈ ಒಪ್ಪಂದಗಳೊಂದಿಗೆ ಈಗಾಗಲೇ ಸುಭದ್ರ ಆರ್ಥಿಕ ಸಹಕಾರ ಹೊಂದಿರುವ ಭಾರತ ಜಪಾನ್ ನಡುವಿನ ಸಂಬಂಧ  ಮತ್ತಷ್ಟು ಗಟ್ಟಿಯಾಗಲಿದ್ದು, ಬರುವ ದಿನಗಳಲ್ಲಿ ಭಾರತಕ್ಕೆ ಜಪಾನ್ ದೇಶದಿಂದ ಬಂಡವಾಳ ಹೂಡಿಕೆ ಮತ್ತು ತಾಂತ್ರಿಕ ನೆರವು ಹರಿದು ಬರಲಿದೆ.

ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಪ್ರಧಾನಿ ಮೋದಿ, ``ಭಾರತದ ಆರ್ಥಿಕ ಕನಸನ್ನು ಸಾಕಾರಗೊಳಿಸುವಲ್ಲಿ ಜಪಾನ್‍ಗಿಂತ ಅತ್ಯುತ್ತಮ ಮಿತ್ರ ಬೇರಾರೂ ಇಲ್ಲ. ಶಿನ್ಜೋ ಅಬೆ  ಅವರು, ಭಾರತ ಜಪಾನ್ ಪಾಲುದಾರಿಕೆಯ ಮಹಾನಾಯಕ ಎಂದು ಬಣ್ಣಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com