
ನವದೆಹಲಿ: ಸಿಬಿಐ ಮಂಗಳವಾರ ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಸುಮಾರು ೧೪ ಕಡೆ ದಾಳಿ ನಡೆಸಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರ್ಯದರ್ಶಿಯವರ ಮನೆಯಲ್ಲಿ ೨.೪ ಲಕ್ಷ ರೂ ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ.
ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ನಿವಾಸದಿಂದ ಮೂರು ಸ್ಥಿರಾಸ್ತಿಗಳ ಕಡತಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರ ತಿಳಿಸಿದ್ದಾರೆ.
ಇದಕ್ಕೂ ಮುಂಚಿತವಾಗಿ ಈ ದಾಳಿಯ ವಿರುದ್ಧ ಹರಿಹಾಯ್ದಿದ್ದ ಕೇಜ್ರಿವಾಲ್ ಇದು ರಾಜಕೀಯ ದ್ವೇಷಕ್ಕಾಗಿ ನಡೆದಿರುವ ಸಂಚು ಎಂದಿದ್ದಲ್ಲದೆ ಮೋದಿ ಅವರು ಹೇಡಿ ಮತ್ತು ಸೈಕೋಪಾತ್ ಎಂದು ಬರೆದಿದ್ದರು.
ತಮ್ಮ ಇಮೇಲ್ ಗಳನ್ನು ತೆರೆದು ತೋರಿಸಲು ಕುಮಾರ್ ಅವರು ಸಹಕರಿಸಿಲ್ಲ ಎಂದು ಕೂಡ ಸಿಬಿಐ ಆರೋಪಿಸಿದೆ.
ಕುಮಾರ್ ಜೊತೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿರುವ ಜಿ ಕೆ ನಂದಾ ಅವರ ಮನೆಯಲ್ಲಿ ೧೦.೫ ಲಕ್ಷ ರೂ ವಶಪಡಿಸಿಕೊಂಡಿರುವುದಾಗಿ ಸಿಬಿಐ ತಿಳಿಸಿದೆ.
ಟೆಲಿಕಮ್ಯುನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (ಟಿಸಿಐಎಲ್) ನಲ್ಲಿ ನಂದಾ ಕಾರ್ಯಕಾರಿ ವ್ಯವಸ್ಥಾಪಕ.
Advertisement