ಸಿಬಿಐ ಬಿಜೆಪಿ ಏಜೆಂಟಾ? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಚೇರಿ ಮೇಲೆ ರಾಜಕೀಯ ಸೇಡಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಕೊಪ್ಪಳ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಚೇರಿ ಮೇಲೆ ರಾಜಕೀಯ ಸೇಡಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಿಬಿಐ ಅನ್ನು ಕಾಂಗ್ರೆಸ್ ಏಜೆಂಟ್ ಎಂದು ಬಿಜೆಪಿಯವರೇ ಕರೆಯುತ್ತಿದ್ದರು. ಈಗ ಸಿಬಿಐ ಬಿಜೆಪಿ ಏಜೆಂಟ್ ಆಗಿದೆಯೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ಅರವಿಂದ ಕೇಜ್ರಿವಾಲ್ ಅವರ ಕಚೇರಿ ಮೇಲಿನ ಸಿಬಿಐ ದಾಳಿಯನ್ನು ಖಂಡಿಸಿದರು. ಬಿಜೆಪಿ ನಡೆಯನ್ನು ಟೀಕಿಸಿದರು.

ನಿವೃತ್ತಿ ಬೇಡ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನ ಗೆದ್ದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅವರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, 'ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಒಂದು ಸ್ಥಾನವನ್ನಾ ಅಗತ್ಯವಿಲ್ಲ,'' ಎಂದು ಸಲಹೆ ನೀಡಿದರು.

ಪರಿಷತ್ ಚುನಾವಣೆ ಬಳಿಕ ಸಿಎಂಗೆ ಶನಿಕಾಟ ಆರಂಭವಾಗುತ್ತದೆ ಎಂಬ ಮಾಜಿ ಸಚಿವ ವಿ. ಸೋಮಣ್ಣ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, 'ಶಾಸ್ತ್ರಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರಿಂದಲೇ ಅವರು ಗೆಲ್ಲಲು ಸಾಧ್ಯವಾಗಲಿಲ್ಲ. ನನಗೆ ಯಾವ ಕಾಟವೂ ಇಲ್ಲ. ಪರಿಷತ್ ಚುನಾವಣೆ ಜನಾದೇಶವಾಗಲ್ಲ,'' ಎಂದರು.

ಸಿಎಂಗೆ ಕರೆಂಟ್ ಶಾಕ್!: ಪ್ರಚಾರ ಸಭೆಯಲ್ಲಿದ್ದ ಸಿಎಂಗೆ ಕರೆಂಟ್ ಶಾಕ್ ಎದುರಾಯಿತು. ಸಭೆಯಲ್ಲಿದ್ದ ಜನ ಮೊದಲು ಕರೆಂಟ್ ಕೊಡಿ ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com