
ಪಾಟ್ನಾ: ಬಿಹಾರದ ಗೋಪಾಲಗಂಜ್ ಜಿಲ್ಲೆಯ ಶಾಲೆಯೊಂದರಲ್ಲಿ ವಿಧವೆಯೊಬ್ಬರು ಮಧ್ಯಾಹ್ನದ ಬಿಸಿಯೂಟ ತಯಾರಿಸುವುದಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿರುವ ವಿಷಯ ತಿಳಿದ ಅನಿವಾಸಿ ಭಾರತೀಯನೊಬ್ಬ ಆಕೆಗೆ ಧನ ಸಹಾಯ ಮಾಡುವ ಮೂಲಕ ನೆರವು ನೀಡಿದ್ದಾರೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆನಡಾ ಮೂಲದ ಎನ್ ಆರ್ ಐ ಸತ್ಪಾಲ್ ಶರ್ಮಾ ಅವರು ಮಹಿಳೆಯ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದಾರೆ ಎಂದು ಗೋಪಾಲಗಂಜ್ ನ ಜಿಲ್ಲಾ ಮೆಜೆಸ್ಟ್ರೆಟ್ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರು ಮಾಡುದ್ದಿದ್ದ ಮಹಿಳೆಯ ಬಿಸಿಯೂಟಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದು ಮಾಧ್ಯಮದಲ್ಲಿ ಕಳೆದ ವಾರ ವರದಿಯಾಗಿತ್ತು. ಇದರ ವಿರುದ್ಧ ಮಹಿಳೆ ರಾಹುಲ್ ಕುಮಾರ್ ಅವರಿಗೆ ದೂರು ನೀಡಿದ್ದರು. ರಾಹುಲ್ ಕುಮಾರ್ ಅವರು ಶಾಲೆಗೆ ಭೇಟಿ ನೀಡಿ ಮಹಿಳೆ ತಯಾರಿಸಿದ್ದ ಊಟ ತಿಂದಿದ್ದರು.
ಈಗ ಮಹಿಳೆ ಮತ್ತೆ ಬಿಸಿಯೂಟ ತಯಾರಿಸುವ ಕೆಲಸಕ್ಕೆ ಹಿಂದಿರುಗಿದ್ದಾರೆ.
Advertisement