ಬಾಲಪರಾಧ ತಿದ್ದುಪಡಿ ಮಸೂದೆ ಅಂಗೀಕಾರ: ಏನಿದು ಐತಿಹಾಸಿಕ ಮಸೂದೆ?

ಹೀನ ಕೃತ್ಯಗಳಲ್ಲಿ ಭಾಗಿಯಾದ 16 ವರ್ಷದಿಂದ 18 ವರ್ಷದೊಳಗಿನ ಮಕ್ಕಳನ್ನೂ ವಯಸ್ಕರೆಂದು ಪರಿಗಣಿಸಿ ವಿಚಾರಣೆ ನಡೆಸುವ ಬಾಲಾಪರಾಧ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಸೂದೆಯನ್ನು ಸಂಸತ್ತು...
ಬಾಲಾಪರಾಧ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ
ಬಾಲಾಪರಾಧ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ
Updated on

ನವದೆಹಲಿ: ಹೀನ ಕೃತ್ಯಗಳಲ್ಲಿ ಭಾಗಿಯಾದ 16 ವರ್ಷದಿಂದ 18 ವರ್ಷದೊಳಗಿನ ಮಕ್ಕಳನ್ನೂ ವಯಸ್ಕರೆಂದು ಪರಿಗಣಿಸಿ ವಿಚಾರಣೆ ನಡೆಸುವ ಬಾಲಾಪರಾಧ ನ್ಯಾಯ (ಮಕ್ಕಳ ಪಾಲನೆ ಮತ್ತು  ರಕ್ಷಣೆ) ಮಸೂದೆಯನ್ನು ಸಂಸತ್ತು ಮಂಗಳವಾರ ಅಂಗೀಕರಿಸಿದೆ.

ಈ ಮಸೂದೆಗೆ ಲೋಕಸಭೆ ಆಗಸ್ಟ್ ನಲ್ಲೇ ಅಂಗೀಕಾರ ನೀಡದ್ದರೆ, ರಾಜ್ಯಸಭೆ ಮಂಗಳವಾರ ಒಪ್ಪಿಗೆ ನೀಡಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರಂಭವಾದ ಮಸೂದೆ ಕುರಿತ ಚರ್ಚೆ  ಮುಗಿದದ್ದು ಸಂಜೆ 7 ಗಂಟೆಗೆ. ಸಿಪಿಎಂ ಸದಸ್ಯರ ಸಭಾತ್ಯಾಗದ ನಡುವೆಯೂ ರಾಜ್ಯಸ ಭೆಯಲ್ಲಿ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.

ಮಸೂದೆ ಏನು ಹೇಳುತ್ತದೆ?
1 ಅತ್ಯಾಚಾರದಂಥ ಹೇಯ ಅಪರಾಧ ಕೃತ್ಯದಲ್ಲಿ ಭಾಗಿಯಾದ 16-18 ವರ್ಷದ ಆರೋಪಿಗಳನ್ನು ವಯಸ್ಕರೆಂದು ಪರಿಗಣಿಸುವುದು.
2 ಇನ್ನುಳಿದ ಅಪರಾಧ ಪ್ರಕರಣಗಳಲ್ಲಿ 21 ವರ್ಷ ವಯೋಮಾನ ಮತ್ತು ನಂತರ ಬಂಧನವಾದಲ್ಲಿ ಅವರನ್ನು ವಯಸ್ಕರೆಂದು ಪರಿಗಣಿಸುವುದು.
3 ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲೂ ಬಾಲ ನ್ಯಾಯ ಮಂಡಳಿ ಹಾಗೂ ಮಕ್ಕಳ ಕಲ್ಯಾಣ ಸಮಿತಿ ರಚನೆ.
4 ಬಾಲಾಪರಾಧಿಯನ್ನು ವೀಕ್ಷಣಾಲಯಕ್ಕೆ ಕಳಿಸುವುದೇ ಅಥವಾ ವಯಸ್ಕನೆಂದು ಪರಿಗಣಿಸಿ ವಿಚಾರಣೆಗೊಳಪಡಿಸುವುದೇ ಎಂಬುದನ್ನು ನಿರ್ಧರಿಸುವ ಅಧಿಕಾರ ಬಾಲ ನ್ಯಾಯ ಮಂಡಳಿಗೆ.
5 ಮಕ್ಕಳ ವಿರುದ್ಧದ ಹಿಂಸಾಚಾರ, ಮಾದಕ ವಸ್ತು ನೀಡುವುದು, ಬೆದರಿಕೆ, ಮಕ್ಕಳ ಮಾರಾಟ ಪ್ರಕರಣಗಳ ಶಿಕ್ಷೆ ಪ್ರಮಾಣ ಪರಿಷ್ಕರಣೆ. ಮಕ್ಕಳ ದತ್ತು ಸ್ವೀಕಾರಹಾಗೂ ದತ್ತು ಪಡೆಯುವ ಅರ್ಹತಾ  ಮಾನದಂಡ ಪರಿಷ್ಕರಣೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com