
ನವದೆಹಲಿ: ವಾಯುಮಾಲಿನ್ಯಕ್ಕೆ ಕಡಿವಾಣ ಹಾಕಲು ಬದಲಿ ದಿನಗಳಂದು ಸರಿ ಬೆಸ ನೋಂದಣಿ ಸಂಖ್ಯೆಯುಳ್ಳ ವಾಹನ ಚಾಲನೆಯನ್ನು ದೆಹಲಿ ಸರ್ಕಾರ ಜನವರಿಯಿಂದ ಜಾರಿಗೆ ತರಲಿದ್ದು ಈ ನಿಯಮದಿಂದ ದ್ವಿಚಕ್ರ ವಾಹನಗಳಿಗೆ ವಿನಾಯಿತೆ ಇದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
"ಈ ಯೋಜನೆಯಿಂದ ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡಲಾಗುತ್ತದೆ ಎಕೆಂದರ ಅವುಗಳ ಸಂಖ್ಯೆ ಅತಿ ಹೆಚ್ಚು ಹಾಗೂ ಸಾರ್ವಜನಿಕ ಸಂಪರ್ಕ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಿಳೆಯರು ಚಾಲನೆ ಮಾಡುವ ಕಾರುಗಳಿಗೂ ಈ ನಿಯಮದಿಂದ ವಿನಾಯಿತಿ ನೀಡುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಧಾನಿಯಲ್ಲಿ ೯೦ ಲಕ್ಷ ವಾಹನಗಳಲ್ಲಿ ಸುಮಾರು ೫೦ ಲಕ್ಷ ದ್ವಿಚಕ್ರ ವಾಹನಗಳಿವೆ ಎಂದು ತಿಳಿಯಲಾಗಿದೆ.
ಈ ನಿಯಮ ಸಿ ಎನ್ ಜಿ ಚಾಲಿತ ವಾಹನಗಳು, ಸಾರ್ವಜನಿಕ ವಾಹನಗಳು ಮತ್ತು ತುರ್ತು ಪರಿಸ್ಥಿತಿಯ ವಾಹನಗಳಿಗೆ ಅನ್ವಯವಾಗುವುದಿಲ್ಲ.
Advertisement