ರು.1,200 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಕಳೆದ 20 ತಿಂಗಳಲ್ಲಿ ಕೇಂದ್ರ ಸರ್ಕಾರ ರು.16 ಸಾವಿರ ಕೋಟಿ ಕಪ್ಪು ಹಣವನ್ನು ಪತ್ತೆಹಚ್ಚಿದೆ...
ಕಪ್ಪು ಹಣ (ಸಂಗ್ರಹ ಚಿತ್ರ)
ಕಪ್ಪು ಹಣ (ಸಂಗ್ರಹ ಚಿತ್ರ)

ನವದೆಹಲಿ: ಕಳೆದ 20 ತಿಂಗಳಲ್ಲಿ ಕೇಂದ್ರ ಸರ್ಕಾರ ರು.16 ಸಾವಿರ ಕೋಟಿ ಕಪ್ಪು ಹಣವನ್ನು ಪತ್ತೆಹಚ್ಚಿದೆ.

ರು.1,200 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದು 774 ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಿದೆ. ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಬುಧವಾರ ಈ ವಿಷಯ ತಿಳಿಸಿದ್ದು  ಹೊರ ದೇಶಗಳಲ್ಲಿ ಇಟ್ಟಿರುವ ಆಸ್ತಿ ಯನ್ನು ಘೋಷಿಸಿಕೊಳ್ಳಲು 90 ದಿನ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ರು.4,160 ಕೋಟಿ ಮಾತ್ರ ಘೋಷಿಸಿಕೊಂಡರು. ಇದರಿಂದ ಬೊಕ್ಕಸಕ್ಕೆ  ರು.2,500 ಕೋಟಿ ತೆರಿಗೆ ಮತ್ತು ದಂಡ ಸಂಗ್ರಹವಾಗಿದೆ ಎಂದು ಅವರು ತಿಳಿಸಿದ್ದಾರೆ. ಕಪ್ಪು ಹಣ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.

ಕಪ್ಪು ಹಣ ಹೊಂದಿರುವವರನ್ನು ಕಾನೂನಿಗೆ ಒಳಪಡಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಹಲವಾರು ಬಾರಿ ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ. ಕಪ್ಪು ಹಣವನ್ನು ಹೊರ ತರುವುದಕ್ಕೆಂದೇ ಕೇಂದ್ರ ಸರ್ಕಾರ ಕಾಯಿದೆ ತಂದಿತು. ಇದರ ಅಡಿಯಲ್ಲಿ ಅಧಿಕ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬಹುದು ಎಂದು ಹಸ್ಮುಖ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com