ದೆಹಲಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ 'ಮೆಸೆಂಜರ್ ಆಫ್ ಗಾಡ್'

'ಮೆಸೆಂಜರ್ ಆಫ್ ಗಾಡ್' ಸಿನೆಮಾದ ನಾಯಕ ನಟ, ದೇರಾ ಸಚ್ಚಾ ಸೌಧ ಸಂಘಟನೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್
ದೇರಾ ಸಚ್ಚಾ ಸೌಧ ಸಂಘಟನೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್
ದೇರಾ ಸಚ್ಚಾ ಸೌಧ ಸಂಘಟನೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್
Updated on

ಚಂಡಿಘರ್: 'ಮೆಸೆಂಜರ್ ಆಫ್ ಗಾಡ್' ಸಿನೆಮಾದ ನಾಯಕ ನಟ, ದೇರಾ ಸಚ್ಚಾ ಸೌಧ ಸಂಘಟನೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ನಾಳೆ ನಡೆಯಲಿರುವ ದೆಹಲಿ ಚುನಾವಣೆಯ ಮತದಾನಕ್ಕೆ ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಾರೆ.

ದೆಹಲಿ ಚುನಾವಣೆಗಳಲ್ಲಿ ದೇರಾ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದು ಹೇಳಿದೆ. ಅಕಾಲಿ ದಳದ ಅಭ್ಯರ್ಥಿಗಳನ್ನು ದೇರಾ ಬೆಂಬಲಿಸಲಿದೆಯೆ ಎಂಬ ಪ್ರಶ್ನೆಗೆ ಕೂಡ ದೇರಾ ಸಕಾರಾತ್ಮಕ ಉತ್ತರ ನೀಡಿದೆ.

ಪಕ್ಕದ ಹರ್ಯಾಣ ಮತ್ತು ಪಂಜಾಬಿನಲ್ಲಿ ಅಪಾರ ಬೆಂಬಲಿಗರನ್ನು ಹೊಂದಿರುವ ದೇರಾ, ದೆಹಲಿಯಲ್ಲೇ ೨೦ ಲಕ್ಷ ಬೆಂಬಲಿಗರಿದ್ದಾರೆ ಎಂದು ಹೇಳಿಕೊಳ್ಳುತ್ತದೆ. ಅವರಲ್ಲಿ ೧೨ ಲಕ್ಷ ಮತದಾರರು ಎಂದು ಕೂಡ ತಿಳಿಸಿದೆ.

ಕಳೆದ ಹರ್ಯಾಣ ಚುನಾವಣೆಯಲ್ಲಿ ಸ್ವತಂತ್ರವಾಗಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಗೆ ಕೂಡ ದೇರಾ ಬೆಂಬಲ ಸೂಚಿಸಿತ್ತು.

"ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು ಪ್ರಧಾನ ಮಾತ್ರಿ ಅವರ ಸ್ವಚ್ಛ ಭಾರತ, ಮಹಿಳಾ ಭ್ರೂಣ ಹತ್ಯೆ ವಿರುದ್ಧದ ನಿಲುವುಗಳಿಮ್ದ ಸಂತಸಗೊಂಡಿದ್ದಾರೆ" ಎಂದು ದೇರಾದ ಮುಖಂಡ ಅಮನ್ ದೀಪ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com