ಮೋದಿ ಯುದ್ದ ವಿಮಾನ ಹಾರಾಟ ನಡೆಸಲ್ಲ

ಫೆ.18ರಿಂದ ಫೆ. 22 ರ ವರೆಗೆ ಯಲಹಂಕ ವಾಯು ನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2015 ಶೋ ಉದ್ಘಾಟನೆಗೆ...
ನರೇಂದ್ರ ಮೋದಿ
ನರೇಂದ್ರ ಮೋದಿ

ಬೆಂಗಳೂರು: ಫೆ.18ರಿಂದ ಫೆ. 22 ರ ವರೆಗೆ ಯಲಹಂಕ ವಾಯು ನೆಲೆಯಲ್ಲಿ ನಡೆಯಲಿರುವ  ಏರೋ ಇಂಡಿಯಾ 2015 ಶೋ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವುದು ಖಾತ್ರಿಯಾಗಿದೆ. ಅದರೆ, ವೈಮಾನಿಕ ಪ್ರದರ್ಶನದ ವೇಳೆ ಮೋದಿ ಅವರು ಯುದ್ಧವಿಮಾನ ಏರಿ ಹಾರಾಟ ನಡೆಸುವುದಿಲ್ಲ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಮೇಕ್ ಇನ್ ಇಂಡಿಯಾ ಥೀಮ್ ನೊಂದಿಗೆ ನಡೆಯಲಿರುವ ಏರೋ ಇಂಡಿಯಾ ಶೋನಲ್ಲಿ ಜಾಗತಿಕ ಮಟ್ಟದ ರಕ್ಷಣಾ, ವಿಮಾನಯಾನ ಹಾಗೂ ಬಾಹ್ಯಾಕಾಶದ ಕಂಪೆನಿಗಳು ಭಾಗವಹಿಸುತ್ತಿರುವುದರಿಂದ ಬಂಡವಾಳ ಆಕರ್ಷಿಸಲು ಪ್ರಧಾನಿಯವರು ಆಗಮಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಯುದ್ಧ ವಿಮಾನ ಹಾರಾಟ ನಡೆಸಲ್ಲ ಮೋದಿ: ಏರೋ ಇಂಡಿಯಾ ಉದ್ಘಾಟನೆ ಬಳಿಕ ಫ್ರಾನ್ಸ್ ಮೂಲದ ಜೆಟ್ ಫೈಟರ್ ವಿಮಾನ ಡಸಾಲ್ಟ್ ರಾಫೆಲ್ ದಲ್ಲಿ ಮೋದಿ ಹಾರಾಟ ನಡೆಸುವ ಸಾಧ್ಯತೆಯಿದೆ. ಈ ಹಾರಾಟ ನಡೆದರೆ ಜೆಟ್ ಫೈಟರ್ ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರವಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅದರೆ,ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಧಾನ ಮಂತ್ರಿಗಳ  ಕಾರ್ಯಾಲಯ,  ಮೋದಿ ಅವರು  ಯುದ್ಧ ವಿಮಾನದಲ್ಲಿ  ಹಾರಾಟ ಮಾಡುವುದಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com