ಪೋಸ್ಟ್ ಮಾರ್ಟಮ್: 'ಜಾತ್ಯಾತೀತ' ಕಾಂಗ್ರೆಸ್ ನಿಂದ ದೂರ ಸರಿದ ಅಲ್ಪಸಂಖ್ಯಾತ ಮತದಾರರು

ದೆಹಲಿ ವಿಧಾಸಭಾ ಚುನಾವಣೆಗಳಲ್ಲಿ ಬಿಜೆಪಿ ದಯನೀಯ ಸೋಲು ಕಂಡಿರಬಹುದು ಆದರೆ ಅದಕ್ಕಿಂತಲೂ ಆಘಾತವಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ.
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ

ನವದೆಹಲಿ: ದೆಹಲಿ ವಿಧಾಸಭಾ ಚುನಾವಣೆಗಳಲ್ಲಿ ಬಿಜೆಪಿ ದಯನೀಯ ಸೋಲು ಕಂಡಿರಬಹುದು ಆದರೆ ಅದಕ್ಕಿಂತಲೂ ಆಘಾತವಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ. 'ಶೂನ್ಯ ಸಂಪಾದನೆ'ಗಿಂತಲೂ ಕಾಂಗ್ರೆಸ್ ಪಕ್ಷಕ್ಕೆ ತಲೆನೋವು ತಂದಿರುವುದು ಪಕ್ಷದ ಸಾಂಪ್ರದಾಯಿಕ ಮತದಾರರಾದ ಅಲ್ಪಸಂಖ್ಯಾತರು ಈಗ ಎಎಪಿ ಪಕ್ಷದಲ್ಲಿ ಹೊಸ 'ಸಂರಕ್ಷಕ'ನನ್ನು ಕಂಡುಕೊಂಡಿರುವುದು.

ಎಎಪಿ ಸಾಧಿಸಿರುವ ಈ ಅಭೂತಪೂರ್ವ ಗೆಲುವಿಗೆ ಅಲ್ಪಸಂಖ್ಯಾತರ ಪಾತ್ರ ದೊಡ್ಡದಿದೆ.

ಅಲ್ಪಸಂಖ್ಯಾತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಚಾಂದಿನಿ ಚೌಕ್ ಮತ್ತು ಮುಸ್ತಫಬಾದ್ ಕ್ಷೇತ್ರಗಳಲ್ಲಿ ಎಎಪಿ ಪಕ್ಷ ತಮ್ಮ ವಿರೋಧಿಗಳನ್ನು ಮೀರಿ ಮುನ್ನಡೆದಿರುವುದು, ಮುಸ್ಲಿಂ ಮತದಾದರು ಎಎಪಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿರುವುದು ಸ್ಪಷ್ಟವಾಗುತ್ತದೆ. ಈ ಕ್ಷೇತ್ರಗಳು ಸಾಮನ್ಯವಾಗಿ ಕಾಂಗ್ರೆಸ್ ಪಕ್ಷದ ಸುರಕ್ಷಿತ ಸ್ಥಾನಗಳು ಎನ್ನಲಾಗುತ್ತಿತ್ತು.

ದೆಹಲಿಯಲ್ಲಿ ಮುಸ್ಲಿಂ ಮತದಾರರು ಶೇಕಡಾ ೧೨% ಇದ್ದರೆ, ಸುಮಾರು ೮ ಕ್ಷೇತ್ರಗಳಲ್ಲಿ ಇವರ ಸಾಂದ್ರತೆ ಸುಮಾರು ೩೦ ರಿಂದ ೩೫%. ಇತ್ತೀಚಿನವರೆಗೂ ಇವರಲ್ಲಿ ಬಹುತೇಕರು ಕಾಂಗ್ರೆಸ್ ಪಕ್ಷಕ್ಕೇ ಮತ ಹಾಕುತ್ತಿದ್ದು,ಈ ಚುನಾವಣೆಗಳಲ್ಲಿ 'ರೂಪಾಂತರ' ಎದ್ದು ಕಾಣುತ್ತಿದೆ. "ಇಷ್ಟು ದಿನ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೇ ಮತ ಹಾಕುತ್ತಿದ್ದುದು ಆ ಪಕ್ಷದ ಮೇಲಿನ ಪ್ರೀತಿಯಿಂದಲ್ಲ. ಆದರೆ ಬೇರೆ ಪರ್ಯಾಯ ಇರಲಿಲ್ಲ. ಈಗ ಎಎಪಿ ಪಕ್ಷದ ಉದ್ಭವದ ನಂತರ ಚಿತ್ರಣ ಬದಲಾಗಿದೆ" ಎನ್ನುತ್ತಾರೆ ಸಂಶೋಧಕ ಜಿಯಾಲ್-ಉಲ್-ರೆಹಮಾನ್.

"ಮುಸ್ಲಿಂ ಸಮುದಾಯದ ಒಂದೇ ಧ್ಯೇಯ ಬಿಜೆಪಿ ಪಕ್ಷವನ್ನು ಸೋಲಿಸುವುದು. ಕಳೆದ ಬಾರಿ ಎಎಪಿ ಪಕ್ಷ ಇನ್ನೂ ಪುಟಿದೆದ್ದಿಲ್ಲದಿದ್ದರಿಂದ ನಾವು ಆ ಪಕ್ಷಕ್ಕೆ ಮತ ಹಾಕಿರಲಿಲ್ಲ ಬದಲಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದೆವು. ಈಗ ಎಎಪಿ ನಂಬಿಕಸ್ಥ ಪಕ್ಷವಾಗಿ ಹೊರಹೊಮ್ಮಿರುವುದರಿಂದ ನಾವು ಕಾಂಗ್ರೆಸ್ ಪಕ್ಷವನ್ನು ಮೀರಿ ಎಎಪಿ ಪಕ್ಷವನ್ನು  ಬೆಂಬಲಿಸಿದ್ದೇವೆ" ಎನ್ನುತ್ತಾರೆ ಮಾಜಿ ಸರ್ಕಾರಿ ಅಧಿಕಾರಿ ಜಿಯಾದ್ ಖಾನ್.

ಇದು ಕ್ರಿಶ್ಚಿಯನ್ ಸಮುದಾಯಕ್ಕೆ ಕೂಡ ಅನ್ವಯಿಸುತ್ತದೆ. ಕಳೆದ ಭಾನುವಾರ ತಮ್ಮ ಸಮುದಾಯದವರಿಗೆ ಎಎಪಿ ಪಕ್ಷವನ್ನು ಬೆಂಬಲಿಸಲು ಕರೆ ಕೊಟ್ಟಿದ್ದರು. ಚರ್ಚ್ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೆ ಪಕ್ಷವೊಂದಕ್ಕೆ ಮತ ಹಾಕಲು ಕರೆಕೊಟ್ಟಿದ್ದು ಬಹುಷಃ ಇದೇ ಮೊದಲ ಬಾರಿ.

"ನಮ್ಮ ಪಾದ್ರಿ ಎಎಪಿ ಪಕ್ಷಕ್ಕೇ ಮತ ಹಾಕುವಂತೆ ನಮಗೆ ಸೂಚಿಸಿದ್ದರು. ಅವರು ಹಾಗೆ ಸೂಚಿಸದೆ ಇದ್ದರೂ ನಾವು ಎಎಪಿ ಪಕ್ಷಕ್ಕೇ ಬೆಂಬಲ ಸೂಚಿಸುತ್ತಿದ್ದೆವು" ಎನ್ನುತ್ತಾರೆ ಕೇಂದ್ರ ವಿಶ್ವವಿದ್ಯಾಲಯದ ಉಪನ್ಯಾಸಕರೊಬ್ಬರು.

ಕಳೆದ ಎರಡು ತಿಂಗಳುಗಳಿಂದ ಐದು ಚರ್ಚುಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದಾಗ, ಕ್ರಿಶ್ಚಿಯನ್ ಸಮುದಾಯಕ್ಕೆ ಬೆಂಬಲ ನೀಡಿದ್ದು ಆಪ್ ಪಕ್ಷವಾದುದರಿಂದ ಆ ಸಮುದಾಯ ಆಪ್ ಪಕ್ಷವನ್ನು ಬೆಂಬಲಿಸಿದೆ ಎಂದು ಕೂಡ ಹೇಳಲಾಗುತ್ತಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com