ಭೂ ಸ್ವಾಧೀನ ಸುಗ್ರೀವಾಜ್ಞೆ: ಅಣ್ಣಾ ಹಜಾರೆ ಧರಣಿ ಪ್ರಾರಂಭ

ಸಾವಿರಾರು ಬೆಂಬಲಿಗರೊಂದಿಗೆ ದೆಹಲಿ ಐತಿಹಾಸಿಕ ಜಂತರ್ ಮಂತರ್ ನಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ನರೇಂದ್ರ ಮೋದಿ ನಾಯಕತ್ವದ
ಅಣ್ಣಾ ಹಜಾರೆ
ಅಣ್ಣಾ ಹಜಾರೆ

ನವದೆಹಲಿ: ಸಾವಿರಾರು ಬೆಂಬಲಿಗರೊಂದಿಗೆ ದೆಹಲಿ ಐತಿಹಾಸಿಕ ಜಂತರ್ ಮಂತರ್ ನಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ನರೇಂದ್ರ ಮೋದಿ ನಾಯಕತ್ವದ ಕೇಂದ್ರಸರ್ಕಾರ ಭೂಸ್ವಾಧೀನ ಕಾಯ್ದೆಯಲ್ಲಿ ತಂದಿರುವ ತಿದ್ದುಪಡಿ ವಿರುದ್ಧ ಎರಡು ದಿನದ ಧರಣಿಯನ್ನು ಪ್ರಾರಂಭಿಸಿದ್ದಾರೆ.

ಈ ತಿದ್ದುಪಡಿಯನ್ನು ಅಸಂವಿಧಾನಿಕ ಮತ್ತು ರೈತ ವಿರೋಧಿ ಎಂದಿರುವ ಹಜಾರೆ ಕೈಗಾರಿಕೋದ್ಯಮಿಗಳಿಗೆ ಸಹಕರಿಸಲು ರೈತರಿಗೆ ಮೋಸ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಈ ಪ್ರಕರಣದಲ್ಲಿ ನರೇಂದ್ರ ಮೋದಿ ಸರ್ಕಾರ ಹಿಂದೆ ಸರಿಯದಿದ್ದರೆ ರಾಮಲೀಲಾ ಮೈದಾನದಿಂದ ಬೃಹತ್ ಮೆರವಣಿಗೆ ನಡೆಸುವುದಾಗಿ ಈ ಹಿಂದೆ ಅಣ್ಣಾ ಹಜಾರೆ ಎಚ್ಚರಿಸಿದ್ದರು.

ದೆಹಲಿಗೆ ಬಂದ ತಕ್ಷಣ, ಈ ಎರಡು ದಿನದ ಧರಣಿಯ ನಂತರ ದೇಶದಾದ್ಯಂತ ಮೂರು-ನಾಲ್ಕು ತಿಂಗಳ ಪಾದಯಾತ್ರೆ ನಡೆಸಿ ಈ ವಿಧೇಯಕದಲ್ಲಿರುವ ರೈತ ವಿರೋಧಿ ತಿದ್ದುಪಡಿಗಳನ್ನು ರೈತರಿಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದ್ದಾರೆ.

ಸದ್ಯದ ಭೂಸ್ವಾದೀನ ಕಾಯ್ದೆ ೨೦೧೩ ರ ಪ್ರಕಾರ ಒಂದು ಭಾಗದ ಜಮೀನನ್ನು ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ಸ್ವಾಧೀನಪಡಿಸಿಕೊಳ್ಳಲು ಶೇಕಾಡ ೭೦ ಭೂಮಾಲೀಕರ ಒಪ್ಪಿಗೆ ಹಾಗೂ ಖಾಸಗಿ ಯೋಜನೆಗಳಿಗೆ ವಶಪಡಿಸಿಕೊಳ್ಳಲು ೮೦% ಭೂಮಾಲಿಕರ ಒಪ್ಪಿಗೆ ಅತ್ಯಗತ್ಯ.

ಆದರೆ ಕಳೆದ ಡಿಸೆಂಬರ್ ನಲ್ಲಿ ಪ್ರಧಾನಿ ಮೋದಿ ನಾಯಕತ್ವದ ಎನ್ ಡಿ ಎ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಕೈಗಾರಿಕಾ ಯೋಜನೆಗಳಿಗೆ, ಸರ್ಕಾರ-ಖಾಸಗಿ ಸಹಭಾಗಿತ್ವ ಯೋಜನೆಗಳಿಗೆ, ಹಳ್ಳಿಗಾಡಿನ ಮೂಲಸೌಕರ್ಯ ಯೋಜನೆಗಳಿಗೆ, ಕೈಗೆಟಕುವ ಆಶ್ರಯ ಯೊಜನೆಗಳಿಗೆ ಹಾಗೂ ಭದ್ರತಾ ಯೋಜನೆಗಳಿಗೆ ಐದು ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ಯಾರ ಒಪ್ಪಿಗೆಯೂ ಅವಶ್ಯಕ ಇಲ್ಲ ಎಂದು ಬದಲಾಯಿಸಿತ್ತು. ಇದಕ್ಕೆ ಸಾಮಾಜಿಕ ಕಾರ್ಯಕರ್ತರ ಹಾಗೂ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ಬಂದಿತ್ತು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com