ಎಎಪಿ ಸರ್ಕಾರ ಬೋಗಸ್ ಆದೇಶ ನೀಡುತ್ತಿದೆ, ಸ್ಲಂ ಧ್ವಂಸ ಕಾರ್ಯ ಮುಂದುವರೆದಿದೆ: ಬಿಜೆಪಿ

ಎಪಿ ಸರ್ಕಾರ ಬೋಗಸ್ ಆದೇಶ ನೀಡುತ್ತಿದೆ ಹಾಗೂ ಜೆಜೆ ಕ್ಲಸ್ಟರ್ಸ್(ಸ್ಲಂ ಪ್ರದೇಶ) ಧ್ವಂಸ ಕಾರ್ಯ ಮುಂದುವರೆದಿದೆ
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on: 

ನವದೆಹಲಿ: ಎಎಪಿ ಸರ್ಕಾರ ಬೋಗಸ್ ಆದೇಶ ನೀಡುತ್ತಿದೆ ಹಾಗೂ ಜೆಜೆ ಕ್ಲಸ್ಟರ್ಸ್(ಸ್ಲಂ ಪ್ರದೇಶ) ಧ್ವಂಸ ಕಾರ್ಯ ಮುಂದುವರೆದಿದೆ ಹಾಗೂ ಗುತ್ತಿಗೆ ಕಾರ್ಮಿಕರನ್ನು ವಜಾ ಮಾಡಲಾಗುತ್ತಿದೆ ಎಂದು ಬಿಜೆಪಿ ಪಕ್ಷದ ಶಾಸಕಾಂಗ ನಾಯಕ ವಿಜೇಂದರ್ ಗುಪ್ತ ಆಪಾದಿಸಿದ್ದಾರೆ.

ದೆಹಲಿ ಶಾಸಕಾಂಗ ಅಧಿವೇಶನದಲ್ಲಿ ಭಾಷಣ ಮಾಡಿದ ಲೆಫ್ಟಿನೆಂಟ್  ಗವರ್ನರ್ ನಜೀಬ್ ಜಂಗ್ ಅವರ ಭಾಷಣವನ್ನು ಟೀಕಿಸಿರುವ ಗುಪ್ತಾ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸಲು ಹಾಕಿರುವ ಯೋಜನೆಗೆ ಯಾವುದೇ ಸಮಯ ಮಿತಿ ಹಾಕಿಕೊಂಡಿಲ್ಲ ಎಂದಿದ್ದಾರೆ.

ಅಲ್ಲದೇ ಮುಖ್ಯಮತ್ರಿ ಅರವಿಂದ್ ಕೇಜ್ರಿವಾಲ್ ಅವರು ವ್ಯಾಟ್ ಆಯುಕ್ತರನ್ನು ಕರೆಸಿ ಆದಾಯ ಹೆಚ್ಚಳ ಮಾಡುವಂತೆ ಸೂಚಿಸಿದ್ದಾರೆ. ಈ ನಡೆ ವ್ಯಾಪಾರಿಗಳ ಸಂಕೀರ್ಣಗಳ ಮೇಲೆ ದಾಳಿ ಮಾಡುವುದು ಮತ್ತು ಅವರಿಗೆ ಕಿರುಕುಳ ಕೊಡುವುದು ಹೆಚ್ಚಾಗಲಿದೆ ಎಂದು ಆಪಾದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com