ಜೊತೆಯಲ್ಲಿ ಓಡಿಹೋದದ್ದಕ್ಕೆ ಪುರುಷನಿಗೆ ಮೊಲೆಯುಣಿಸಲು ಮಹಿಳೆಗೆ ಶಿಕ್ಷೆ

ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಒಂದು ಹಳ್ಳಿಯಲ್ಲಿ ಪುರುಷನೊಬ್ಬನ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಂದೋರ್: ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಒಂದು ಹಳ್ಳಿಯಲ್ಲಿ ಪುರುಷನೊಬ್ಬನ ಜೊತೆ ಓಡಿಹೋಗಿದ್ದ ೨೫ ವರ್ಷದ ವಿವಾಹಿತ ಮಹಿಳೆಗೆ ಬುಡಕಟ್ಟು ಪಂಚಾಯತಿ ಆ ಪುರುಷನಿಗೆ ಮೊಲೆಯುಣಿಸುವ ಶಿಕ್ಷೆಯನ್ನು ಮಹಿಳೆಗೆ ನೀಡಿದೆ.

ಆ ಪುರುಷ ಮತ್ತು ಮಹಿಳೆಯ ತಲೆ ಬೋಳಿಸುವಂತೆ ಕೂಡ ಕಳೆದ ವರ್ಷದ ಕೊನೆಯ ದಿನ ಇಂದೋರ್ ನಿಂದ ಸುಮಾರು ೨೦೦ ಕಿಮೀ ದೂರವಿರುವ ಭಿಲ್ ಬುಡಕಟ್ಟು ಪಂಚಾಯತ್ ಶಿಕ್ಷೆ ನೀಡಿದೆ.

ಗುರುವಾರ ಆ ಮಹಿಳೆ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನ ಪ್ರಕಾರ, ಈ ಪಂಚಾಯತ್ ಆ ಗ್ರಾಮದ ನಿವಾಸಿಗಳ ಎದುರಿಗೇ ಈ ಶಿಕ್ಷೆಯನ್ನು ನೀಡಿ, ಅದನ್ನು ನಿರ್ವಹಿಸಿದ್ದಾರೆ ಕೂಡ.

ಇದರ ಹಿನ್ನಲೆಯಲ್ಲಿ ಪೊಲೀಸರು ಕೆಲವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ ಎಂದು ಅಲಿರಾಜಪುರದ ಪೊಲೀಸ್ ಉಪ ಆಯುಕ್ತ ಅಖಿಲೇಶ್ ಝಾ ಶುಕ್ರವಾರ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com