ಧಾರ್ಮಿಕ ಆಚರಣಾ ಪ್ರದೇಶಗಳಲ್ಲಿ ಸಿ ಸಿ ಟಿ ವಿ ಅಳವಡಿಸಿ: ದೆಹಲಿ ಪೊಲೀಸ್

ದೇವಸ್ಥಾನಗಳು, ಮಸೀದಿಗಳು, ಚರ್ಚ್ ಗಳು ಮತ್ತು ಗುರುದ್ವಾರಗಳು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇವಸ್ಥಾನಗಳು, ಮಸೀದಿಗಳು, ಚರ್ಚ್ ಗಳು ಮತ್ತು ಗುರುದ್ವಾರಗಳು ಸೇರಿದಂತೆ ದೆಹಲಿಯ ಎಲ್ಲ ಧಾರ್ಮಿಕ ಆಚರಣ ಪ್ರದೇಶಗಳಲ್ಲಿ ಸಿ ಸಿ ಟಿ ವಿ ಅಳವಡಿಸಬೇಕು ಎಂದು ದೆಹಲಿಯ ಪೊಲೀಸರು ಸೂಚಿಸಿದ್ದಾರೆ. ಈ ನಡೆಯಿಂದ ಮುಂದಾಗಬಹುದಾದ ಅನಪೇಕ್ಷಿತ ಘಟನೆಗಳನ್ನು ತಡೆಯಲು ಸಹಾಯವಾಗುತ್ತದೆ ಎಂದಿದ್ದಾರೆ ಪೊಲೀಸರು.

ಈ ಧಾರ್ಮಿಕ ಆಚರಣ ಪ್ರದೇಶಗಳನ್ನು ನಡೆಸುತ್ತಿರುವ ಆಡಳಿತ ಮಂಡಲಿಗೆ ಈ ನಡಾವಳಿಯ ಸೂಚನೆಯನ್ನು ಪೋಲಿಸರು ತಲುಪಿಸಿದ್ದಾರೆ. ಡಿಸೆಂಬರ್ ೧ ರಂದು ದಿಲ್ಶಾದ್ ಗಾರ್ಡನ್ ಪ್ರದೇಶದ ಒಂದು ಪ್ರಮುಖ ಚರ್ಚ್ ನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಕ್ರಿಶ್ಚಿಯನ್ ಸಮುದಾಯ ಈ ಘಟನೆಯ ಹಿಂದೆ ಪಿತೂರಿ ಇದೆ ಎಂದು ದೂರಿದ್ದರು. ಈ ಹಿನ್ನಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು, ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲು ಈ ಸೂಚನೆ ನೀಡಲಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ ಎಸ್ ಬಸ್ಸಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com