ಸುನಂದಾ ಪುಷ್ಕರ್ ಕೊಲೆ ಎಫ್ ಐ ಆರ್: ಪ್ರಮುಖ ಅಂಶಗಳು

ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ಬಗ್ಗೆ ಅಖಿಲ ಭಾರತ ವೈದ್ಯಕೀಯ ...
ದಿವಂಗತ ಸುನಂದಾ ಪುಷ್ಕರ್
ದಿವಂಗತ ಸುನಂದಾ ಪುಷ್ಕರ್

ನವದೆಹಲಿ: ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ಬಗ್ಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಲ್ಲಿಸಿರಿವ ಅಂತಿಮ ವೈದ್ಯಕೀಯ ವರದಿಯಲ್ಲಿ, ಪುಷ್ಕರ್ ಅವರು ವಿಷಪ್ರಾಶನದಿಂದ ಮೃತಪಟ್ಟಿದ್ದಾರೆ ಹಾಗೂ ಇದನ್ನು ಒತ್ತಾಯಪೂರ್ವಕವಾಗಿ ಕುಡಿಸಿದ್ದಾರೆ ಅಥವಾ ಚುಚ್ಚುಮದ್ದಿನ ಮೂಲಕ ಅವರ ದೇಹದೊಳಕ್ಕೆ ಸೇರಿಸಲಾಗಿದೆ ಎಂದಿದೆ ಹಾಗೂ ಅವರ ದೇಹದ ಮೇಲಿದ್ದ ಗಾಯದ ಗುರುತುಗಳಲ್ಲಿ ಒಂದನ್ನು ಬಿಟ್ಟು ಉಳಿದವೆಲ್ಲಾ ಯಾರ ಜೊತೆಗೋ ನಡೆದ ದೈಹಿಕ ಗುದ್ದಾಟದಿಂದ ಆಗಿರುವುದು ಎಂದಿದೆ ಪೊಲೀಸರ ಮೊದಲ ತನಿಖಾ ವರದಿ.

ಎಫ್ ಐ ಆರ್ ನ ಪ್ರಮುಖ ಅಂಶಗಳು ಹೀಗಿವೆ
* ಸುನಂದಾ ಅವರ ದೇಹದ ಮೇಲೆ ಕಂಡು ಬಂದ ಎಲ್ಲಾ ಗಾಯಗಳು ಮಾರಣಾಂತಿಕವಲ್ಲದಿದ್ದರೂ, ಸರಳ ಕಾದಾಟದಿಂದ ಆಗಿರುವುವು. ಆದರೆ ೧೦ ನೇ ಸಂಖ್ಯೆ ಗುರುತೊಂದು ಮಾತ್ರ ಚುಚ್ಚುಮದ್ದಿನ ಗುರುತು.

*೧೨ ನೆ ಗಾಯದ ಸಂಖ್ಯೆ ಹಲ್ಲಿನಿಂದ ಕಚ್ಚಿದ ಗುರುತು. ೧ರಿಂದ ೧೫ ರವರೆಗಿನ ಗುರುತುಗಳು ಹಿಂದಿನ ೧೨ ಘಂಟೆಗಳಿಂದ ೪ ದಿನಗಳದವರೆಗೆ ಆಗಿರಬಹುದಾದವು.

*ಇದು ಸ್ವಾಭಾವಿಕ ಸಾವಲ್ಲ. ವಿಷವನ್ನು ಕುಡಿಸಲಾಗಿದೆ. ಚುಚ್ಚುಮದ್ದಿನ ಮೂಲಕವೂ ವಿಷವನ್ನು ದೇಹದೊಳಗೆ ಸೇರಿಸಿರುವ ಸಾಧ್ಯತೆ ಇದೆ.

*ಮರಣೋತ್ತರ ಪರೀಕ್ಷೆಯನ್ನು ನವದೆಹಲಿಯ ಏಮ್ಸ್ ನಲ್ಲಿ ಜನವರಿ ೧೮ ರಂದು ನಡೆಸಲಾಗಿದೆ. ಆ ಮರಣೋತ್ತರ ಪರೀಕ್ಷಾ ಸಮಿತಿಯಲ್ಲಿ ಏಮ್ಸ್ ನ ೩ ಜನ ವೈದ್ಯಕೀಯ ನ್ಯಾಯಶಾಸ್ತ್ರದ ವೈದ್ಯರಿದ್ದರು.

*ಮರಣೋತ್ತರ ಪರೀಕ್ಷೆ ಸಮಿತಿ ಇದು ವಿಷ ಪ್ರಾಶಾನದಿಂದ ಆಗಿರುವ ಸಾವು. ಹಾಗೂ ಸಾಂದರ್ಭಿಕ ಸಾಕ್ಷ್ಯಗಳಿಂದ ಇದು ಅಲ್ಪ್ರಝೋಲಮ್ ವಿಷ ಪ್ರಾಶಾನ ಎಂದು ಸೂಚಿಸುತ್ತದೆ ಎಂದಿದ್ದರು.

* ಜನವರಿ ೧೭ ರಂದು ಸರಿಸುಮಾರು ರಾತ್ರಿ ೯ ಘಂಟೆಗೆ ಇನ್ಸ್ಪೆಕ್ಟರ್ ಅತುಲ್ ಸೂದ್ ಅವರಿಗೆ ಆಗಿನ ಮಾನವಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವ ಶಶಿ ತರೂರ್ ಅವರಿಂದ ದೂರವಾಣಿ ಕರೆ ಬಂದಿತ್ತು. ನವದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ನ ಕೊಠಡಿ ಸಂಖ್ಯೆ ೩೪೫ ರಲ್ಲಿ ಸುನಂದಾ ಅವರು ಏನೋ ಮಾಡಿಕೊಂಡಿದ್ದಾರೆ ಎಂದು ಶಶಿ ತರೂರ್ ಇನ್ಸ್ಪೆಕ್ಟರ್ ಅವರಿಗೆ ತಿಳಿಸಿದ್ದರು. (ಪುಷ್ಕರ್ ಅವರು ಜನವರು ೧೫, ೨೦೧೪ ಸಂಜೆ ೫:೪೮ ಹೋಟೆಲ್ ಗೆ ಬಂದಿದ್ದರು)

* ಸುನಂದಾ ಅವರು ಆರೋಗ್ಯವಾಗಿದ್ದರು. ಬೇರೆ ಯಾವ ಮಾರಣಾಂತಿಕ ರೋಗವೂ ಅವರಿಗೆ ಇರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com