ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿತ್ರದುರ್ಗದಲ್ಲಿ ಕಾರು-ಲಾರಿ ಡಿಕ್ಕಿ: 6 ಅಯ್ಯಪ್ಪ ಭಕ್ತರು ದುರ್ಮರಣ

6 ಮಂದಿ ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ...
Published on

ಚಿತ್ರದುರ್ಗ: ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಶಬರಿಮಲೆಯಿಂದ ಹಿಂತುರುಗುತ್ತಿದ್ದ 6 ಮಂದಿ ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಬಳ್ಳಾರಿ ಮೂಲವದವರು ಎಂದು ತಿಳಿದುಬಂದಿದೆ.

ಶಬರಿಮಲೆಯಿಂದ ಬಳ್ಳಾರಿಗೆ ಬರುತ್ತಿದ್ದ ಕಾರಿ, ಲಾರಿಯೊಂದು ಡಿಕ್ಕಿ ಹೊಡಿದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಯ್ಯಪ್ಪ ಭಕ್ತರ ಪೈಕಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಬರಿಮಲೆಗೆ ತೆರಳಿದ್ದ ಭಕ್ತರು ನೆನ್ನೆ ರಾತ್ರಿ ಶಬರಿಮಲೆಯಿಂದ ಬಳ್ಳಾರಿಯತ್ತ ಹಿಂತಿರುಗುತ್ತಿದ್ದರು.

ಇಂದು ಬೆಳಿಗ್ಗೆ, ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆಯತ್ತ ಸಮೀಪಿಸುತ್ತಿದ್ದಂತೆ, ಎದುರುಗಡೆಯಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕ ಕಾರಿನ ಮುಂಭಾಗ ನಜ್ಜುಗುಜ್ಜಾಗಿ ಸ್ಥಳದಲ್ಲೇ 6 ಮಂದಿ ಅಯ್ಯಪ್ಪ ಭಕ್ತರು ದುರ್ಮರಣಕ್ಕೀಡಾಗಿದ್ದಾರೆ.

ಕಾರಿನಲ್ಲಿದ್ದ ಮತ್ತೆ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಲಂಕಾರೆಡ್ಡಿ, ತಿರುಮಲ, ಶಿವಾ, ಸಣ್ಣಪ್ಪ, ಹೊನ್ನೂರು ಸ್ವಾಮಿ ಎಂದು ಗುರುತಿಸಲಾಗಿದೆ. ಮೃತರೆಲ್ಲರು ಬಳ್ಳಾರಿ ಮೂಲದವರಾಗಿದ್ದಾರೆ.

ಸ್ಥಳಕ್ಕೆ ಮೊಳಕಾಲ್ಮೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com