
ಮುಂಬೈ: ಅಮೇರಿಕ ಮೂಲದ ಸರ್ಚ್ ಎಂಜಿನ್ ದೈತ್ಯ ಸಂಸ್ಥೆಯನ್ನು ಅಚ್ಚರಿ ಪಡಿಸಿರುವ ನಡೆಯಲ್ಲಿ ಶಿವಸೇನೆ ತನ್ನ ದಿವಂಗತ ಸಂಸ್ಥಾಪಕ ಭಾಳಾ ಠಾಕ್ರೆ ಅವರ ೮೯ನೆ ಜನ್ಮ ವರ್ಷದ ದಿನಕ್ಕೆ (ಜನವರಿ ೨೩) "ಗೂಗಲ್ ಡೂಡಲ್" ಗಾಗಿ ಬೇಡಿಕೆಯಿಟ್ಟಿದೆ.
ಈ ನಿಟ್ಟಿನಲ್ಲಿ ಗೂಗಲ್ ಸಂಸ್ಥೆಗೆ, ಹಣಕಾಸು ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವ ಅರುಣ್ ಜೇಟ್ಲಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಒಳಗೊಂಡಂತೆ ಹಿರಿಯ ಬಿಜೆಪಿ ನಾಯಕರಿಗೆ ದೋಡಲ್ ಗಾಗಿ ಸಹಾಯಕ್ಕಾಗಿ ಪತ್ರ ಬರೆದಿದ್ದೇನೆ ಎಂದು ಮುಂಬೈ ದಕ್ಷಿಣ ಕೆಂದ್ರದ ಲೋಕಸಭಾ ಸದಸ್ಯ ಶಿವಸೇನೆಯ ರಾಹುಲ್ ಶೇವಾಲೆ ತಿಳಿಸಿದ್ದಾರೆ.
ಗೂಗಲ್ ನ ಸರ್ಚ್ ಮುಖಪುಟದಲ್ಲಿ ಆ ದಿನದ ವಿಷೇಶತೆಗೆ ತಕ್ಕಂತೆ ತನ್ನ ಲೋಗೋವನ್ನು ತಾತ್ಕಾಲಿಕವಾಗಿ ಬದಲಾಗುವ ಚಿತ್ರವೇ ಗೂಗಲ್ ಡೂಡಲ್.
Advertisement