
ಮುಜಪ್ಫರ್ ನಗರ: ಉತ್ತರಪ್ರದೇಶದ ದೂರ್ಲಾ ರೈಲ್ವೆ ಪೊಲೀಸ್ ಠಾಣೆಯ ಬಳಿ ರೈಲ್ವೆ ಹಳಿಗಳಲ್ಲಿ ಒಬ್ಬ ಯುವಕ ಮತ್ತು ಯುವತಿಯ ಶವ ಪತ್ತೆಯಾಗಿದ್ದು, ಇದು ಮರ್ಯಾದಾ ಹತ್ಯೆಯ ಪ್ರಕರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತ ಪಟ್ಟ ಯುವಕ ವಿವೇಕ್ ಕುಮಾರ್ (೨೨), ಪಾಲಿಟೆಕ್ನಿಕ್ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಇವನು ಶನಿವಾರದಿಂದ ಕಾಣೆಯಾಗಿದ್ದನು ಎಂದು ತಿಳಿದುಬಂದಿದೆ. ಮೃತ ಪಟ್ಟ ಹುಡುಗಿಯ ಬಗ್ಗೆ ಇನ್ನೂ ಮಾಹಿತಿ ಸಿಕಿಲ್ಲ. ವಯಸ್ಸು ಸುಮಾರು ೨೦ ಇರಬಹುದು ಎಂದು ಅಂದಾಜಿಸಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಮೃತಪಟ್ಟ ಯುವಕ-ಯುವತಿ ಗೆಳೆಯರಿರಬಹುದು ಹಾಗೂ ಇದು ಮರ್ಯಾದಾ ಹತ್ಯೆ ಎಂದೆನಿಸುತ್ತಿದೆ ಎಂದಿದ್ದಾರೆ ಪೊಲೀಸರು. ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
Advertisement