ಮಾವೋವಾದಿಗಳಿಂದ ರೇಲ್ವೇ ಹಳಿ ಸ್ಫೋಟ

ಶನಿವಾರ ಬೆಳಗ್ಗೆ ಒಡಿಶಾದಲ್ಲಿ ಮಾವೋವಾದಿಗಳು ವಿಶಾಖಪಟ್ಟಣಂ- ರಾಯ್‌ಪುರ್ ರೇಲ್ವೇ ಹಳಿ ಸ್ಫೋಟಿಸಿದರ ಪರಿಣಾಮ...
ರೇಲ್ವೇ ಹಳಿ ಸ್ಫೋಟ (ಸಾಂದರ್ಭಿಕ ಚಿತ್ರ)
ರೇಲ್ವೇ ಹಳಿ ಸ್ಫೋಟ (ಸಾಂದರ್ಭಿಕ ಚಿತ್ರ)

ಒಡಿಶಾ: ಶನಿವಾರ ಬೆಳಗ್ಗೆ ಒಡಿಶಾದಲ್ಲಿ ಮಾವೋವಾದಿಗಳು ವಿಶಾಖಪಟ್ಟಣಂ- ರಾಯ್‌ಪುರ್ ನಡುವಿನ ರೇಲ್ವೇ ಹಳಿ ಸ್ಫೋಟಿಸಿದರ ಪರಿಣಾಮ ಓರ್ವ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಇಲ್ಲಿವ ಮುನಿಗುಂಡ ರೇಲ್ವೇ ಸ್ಟೇಷನ್ ಸಮೀಪದಲ್ಲಿರುವ ಮುನಿಖೋಲ್ ಎಂಬಲ್ಲಿ ಕಡಿಮೆ ತೀವ್ರತೆಯಿರುವ ಸ್ಫೋಟಕ ಬಳಸಿ ಮಾವೋವಾದಿಗಳು ಸ್ಫೋಟ ನಡೆಸಿದ್ದಾರೆ ಎಂದು  ರಾಯ್‌ಗಡ ಎಸ್ಪಿ ಕೆ.ಸಿಬಾಸುಬ್ರಮಣಿ ಹೇಳಿದ್ದಾರೆ.

ಈ ಸ್ಫೋಟದಲ್ಲಿ ರೈಲ್ವೇ ಗ್ಯಾಂಗ್‌ಮೆನ್ ಹರಿ ಮಿರ್ದಾ ಅವರು ಗಾಯಗೊಂಡಿದ್ದಾರೆ ಎಂದು ರೈಲ್ವೇ ರಕ್ಷಣಾ ಪಡೆ ಅಧಿಕಾರಿಗಳು ಹೇಳಿದ್ದಾರೆ.

ಬಾಂಬ್ ನಿಗ್ರಹ ದಳ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು ಮಾವೋವಾದಿಗಳೇ ಈ ಕೃತ್ಯವೆಸಗಿದ್ದಾರೆಂದು ಶಂಕೆ ವ್ಯಕ್ತ ಪಡಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ಅಡಚಣೆಯುಂಟಾಗಿದ್ದು ಕೆಸಿಂಗಾ, ಮುನಿಗುಂಡಾ ಮತ್ತು ರಾಯ್‌ಗಡ ರೈಲ್ವೇ ಸ್ಟೇಷನ್‌ನಲ್ಲಿ ಅರ್ಧ ಡಜನ್‌ನಷ್ಟು ರೈಲುಗಳನ್ನು ಸಂಚಾರ ಸ್ಥಗಿತಗೊಳಿಸಿ ನಿಲ್ಲಿಸಲಾಗಿದೆ.

ಭಾರತಕ್ಕೆ ಒಬಾಮಾ ಭೇಟಿ ನೀಡುವುದನ್ನು ವಿರೋಧಿಸಿ ಆ ಬಾಂಬ್ ಸ್ಫೋಟ ನಡೆಸಿದ್ದೇವೆ ಎಂದು ಹೇಳುವ ಬ್ಯಾನರ್ ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದು, ಸ್ಫೋಟದ ಹೊಣೆಯನ್ನು ಸಿಪಿಐ (ಮಾವೋವಾದಿ) ಸಂಘಟನೆ ಹೊತ್ತುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com