ಗ್ರಾಮೀಣ ಭಾರತ ಪ್ರಕಾಶಿಸುತ್ತಿಲ್ಲ

ವಿಶ್ವ ಆರ್ಥಿಕ ಭೂಪಟದಲ್ಲಿ ಭಾರತ ಪ್ರಕಾಶಿಸುತ್ತಿರಬಹುದು. ವಿಶ್ವದ ಸೂಪರ್ ಪವರ್ ಆಗಲಿರುವ ರಾಷ್ಟ್ರವಾಗಿ ಕಂಗೊಳಿಸುತ್ತಿರಬಹುದು. ಆದರೆ, ಝಗಮಗ ಬೆಳಕಿನ ಪರದೆಯ ಹಿಂದಿರುವ ದೇಶದ ಗ್ರಾಮೀಣ ಪ್ರದೇಶಗಳ ಮಾತ್ರ ಬಣ್ಣ ಮಸುಕಾಗುತ್ತಿದೆ...
ಗ್ರಾಮೀಣ ಭಾರತ
ಗ್ರಾಮೀಣ ಭಾರತ
Updated on

ನವದೆಹಲಿ: ವಿಶ್ವ ಆರ್ಥಿಕ ಭೂಪಟದಲ್ಲಿ ಭಾರತ ಪ್ರಕಾಶಿಸುತ್ತಿರಬಹುದು. ವಿಶ್ವದ ಸೂಪರ್ ಪವರ್ ಆಗಲಿರುವ ರಾಷ್ಟ್ರವಾಗಿ ಕಂಗೊಳಿಸುತ್ತಿರಬಹುದು. ಆದರೆ, ಝಗಮಗ ಬೆಳಕಿನ ಪರದೆಯ  ಹಿಂದಿರುವ ದೇಶದ ಗ್ರಾಮೀಣ ಪ್ರದೇಶಗಳ ಮಾತ್ರ ಬಣ್ಣ ಮಸುಕಾಗುತ್ತಿದೆ.

ಎಂಟು ದಶಕಗಳ ಬಳಿಕ ದೇಶದಲ್ಲಿ ನಡೆದ ಮೊದಲ, ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ(ಎಸ್‍ಇಸಿಸಿ) ಗ್ರಾಮೀಣ ಪ್ರದೇಶಗಳ ಈ ಆಘಾತಕಾರಿ ಚಿತ್ರಣವನ್ನು ಅನಾವರಣ ಮಾಡಿದೆ.  ಗ್ರಾಮೀಣ ಭಾರತದ ಮೂರರಲ್ಲಿ ಒಂದು ಕುಟುಂಬಕ್ಕೆ ಸ್ವಂತ ಜಮೀನೇ ಇಲ್ಲ, ಇವರಲ್ಲಿ ಬಹುತೇಕರ ಬದುಕಿನ ಬಂಡಿ ದೈಹಿಕ ಶ್ರಮದಿಂದಷ್ಟೇ ಮುಂದೆ ಸಾಗಬೇಕು. ಕನಿಷ್ಠ ಅಗತ್ಯಗಳನ್ನು  ಪೂರೈಸಿಕೊಳ್ಳುವಷ್ಟು ಶಕ್ತಿ ಅವರಲ್ಲಿಲ್ಲ. ಇವರಲ್ಲಿ ನಾಲ್ಕರಲ್ಲಿ ಮೂರು ಕುಟುಂಬಗಳ ತಿಂಗಳ ಕನಿಷ್ಠ ಸಂಪಾದನೆಯೇ ರು.5 ಸಾವಿರಕ್ಕಿಂತ ಕಡಿಮೆ ಎನ್ನುವ ಸತ್ಯವನ್ನು ಬಡತನ ಮಟ್ಟವನ್ನು  ಅಳೆಯಲು ಸ್ವಾತಂತ್ರ್ಯಾನಂತರ ನಡೆಸಿದ ದೇಶದ ಈ ಮೊದಲ ಕಾಗದ ರಹಿತ ಸಮಗ್ರ ಮಾಹಿತಿ ಬಹಿರಂಗಪಡಿಸಿದೆ.

ಬೇಸರದ ಸಂಗತಿಯೆಂದರೆ ಶೇ. 51.8ರಷ್ಟು ಅಥವಾ 9.16 ಕೋಟಿ ಗ್ರಾಮೀಣ ಕುಟುಂಬಗಳ ಒಲೆ ಉರಿಯೋದೆ ಮಾಮೂಲಿ ಕೂಲಿ ಹಾಗೂ ದೈಹಿಕ ಶ್ರಮದಿಂದಷ್ಟೆ. 44 ಲಕ್ಷ ಕುಟುಂಬಗಳ  ಅರೆಕಾಲಿಕ ಅಥವಾ ಪೂರ್ಣಲಿಕ ಗೃಹಕೃತ್ಯಗಳಿಂದ. ಕೇವಲ ಶೇ .9.68ರಷ್ಟು ಕುಟುಂಬಗಳು ಮಾತ್ರ ನಿಯಮಿತ ವೇತನ ಪಡೆಯುವ ಸದಸ್ಯರನ್ನು ಹೊಂದಿವೆ ಎಂದು ಹೇಳಿದೆ. ಇಷ್ಟೇ ಅಲ್ಲ, ಗ್ರಾಮೀಣ ಪ್ರದೇಶ ಶೈತ್ರಣಿಕವಾಗಿ ಹಿಂದುಳಿದಿರುವ ವಿಚಾರವನ್ನೂ ಈ ಸಮೀಕ್ಷೆ ಬಹಿರಂಗಪಡಿಸಿದೆ. ಗ್ರಾಮೀಣ ಪ್ರದೇಶ ದಲ್ಲಿರುವ ಶೇ.23.52ರಷ್ಟು ಕುಟುಂಬಗಳಲ್ಲಿ 25 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರೆಲ್ಲ ಬಹುತೇಕ ಅನಕ್ಷರಸ್ಥರಂತೆ.

ಗುರುತಿಸೋದು ಹೇಗೆ?

ಈ ಗಣತಿ ಬಡತನಕ್ಕೂ ಹೊಸ ವ್ಯಾಖ್ಯಾನ ನೀಡಿದೆ. ಸ್ಥಿರದೂರವಾಣಿ, 3 ಕೋಣೆಗಳ , ಕಾಂಕ್ರೀಟ್  ಗೋಡೆ ಹೊಂದಿರುವ ಮನೆ ಕುಟುಂಬವನ್ನು ಸ್ವಯಂ ಚಾಲಿತವಾಗಿ ಬಡವರ ಪಟ್ಟಿಯಿಂದ  ಹೊರಗಿಡುತ್ತದೆ. ಇದೇ ರೀತಿಯ ಅನೇಕ ಸೂಚಕಗಳು ಕುಟುಂಬವೊಂದನ್ನು ಬಡತನ ಮತ್ತು ಮೂಲಸೌಲಭ್ಯಗಳಿಂದ ವಂಚಿತ ಕುಟುಂಬಗಳ ಪಟ್ಟಿ ಯಿಂದ ಹೊರಗಿಡುತ್ತವೆ. ಐದು(ಏಳರಲ್ಲಿ)  ಮಾನದಂಡಗಳು ಕುಟುಂಬವೊಂದನ್ನು ಸ್ವಯಂಚಾಲಿತವಾಗಿ ಬಡತನದ ಪಟ್ಟಿಗೆ ಸೇರಿಸುತ್ತವೆ. ಅವು ಸ್ವಂತ ಮನೆ, ನಾಗರಿಕ ಸಂಪರ್ಕವಿಲ್ಲದ ಗುಡ್ಡಗಾಡು ಜನಾಂಗದ ಗುಂಪು ಹೀಗೆ... ಕನಿಷ್ಠ ಮೂಲಸೌಲ ಭ್ಯವೂ ಇಲ್ಲದ ಕಡು ಬಡವರನ್ನು ಗುರುತಿಸಲೂ ಇಂಥಹ ಸೂಚಕಗಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com